ಗ್ರೆಗ್ ಚಾಪೆಲ್ ಸಂಚು ಪತ್ತೆ ಹಚ್ಚಿ ಗಂಗೂಲಿಗೆ ಹೇಳಿದ್ದೆ: ವೀರೇಂದ್ರ ಸೆಹ್ವಾಗ್
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಕೈಬಿಡುವಂತೆ ಮಾಜಿ ಕೋಚ್ ಗ್ರೆಗ್ ಚಾಪೆಲ್ ನಡೆಸುತ್ತಿದ್ದ ಸಂಚಿನ ಬಗ್ಗೆ ಗಂಗೂಲಿಗೆ ಮಾಹಿತಿ...

Published On :
ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಕೈಬಿಡುವಂತೆ ಮಾಜಿ ಕೋಚ್ ಗ್ರೆಗ್ ಚಾಪೆಲ್ ನಡೆಸುತ್ತಿದ್ದ ಸಂಚಿನ ಬಗ್ಗೆ ಗಂಗೂಲಿಗೆ ಮಾಹಿತಿ ನೀಡಿದ್ದು ನಾನೇ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್ ಜಿಂಬಾಬ್ವೆ ಪ್ರವಾಸದ ವೇಳೆ ನಾನು ಹೊಟ್ಟೆ ನೋವಿನ ಕಾರಣ ನೀಡಿ ಪದೇ ಪದೇ ಮೈದಾನ ತೊರೆದು ಪೆವಿಲಿಯನ್ ಗೆ ತೆರಳಿದೆ. ಆ ವೇಳೆ ಶೌಚಾಲಯದ ಬಳಿ ಚಾಪೆಲ್ ಬಿಸಿಸಿಐಗೆ ಇ-ಮೇಲ್ ಕಳುಹಿಸುತ್ತಿದ್ದನ್ನು ನೋಡಿದೆ. ಆದರೆ ಅದೇನು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಮೈದಾನಕ್ಕೆ ವಾಪಸಾದ ಕೂಡಲೇ ಗಂಗೂಲಿಗೆ ಆ ಬಗ್ಗೆ ತಿಳಿಸಿ ಚಾಪೆಲ್ ಅನುಮಾನ ಬರುವ ರೀತಿಯಲ್ಲಿ ಏನೋ ಮಾಡುತ್ತಿದ್ದಾರೆ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ನಂತರ ಈ ಪ್ರವಾಸದಲ್ಲೇ ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕುವಲ್ಲಿ ಚಾಪೆಲ್ ಯಶಸ್ವಿಯಾಗಿದ್ದರು. ಗಂಗೂಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹೇಗೆ ಭಾರತೀಯ ಕ್ರಿಕೆಟ್ ಅನ್ನು ಹಾಳು ಮಾಡಿದರು ಎಂದು ಹಲವು ವೇದಿಕೆಗಳಲ್ಲಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaBCCIಬಿಸಿಸಿಐVirender Sehwagವೀರೇಂದ್ರ ಸೆಹ್ವಾಗ್Sourav Gangulyಸೌರವ್ ಗಂಗೂಲಿGreg Chappellಗ್ರೆಗ್ ಚಾಪೆಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


