ಕ್ರಿಕೆಟ್

ಎಬಿಡಿ ವಿಲಿಯರ್ಸ್ ರೀತಿ ಹೊಸಹೊಸ ಹೊಡತೆಗಳನ್ನು ಬಾರಿಸಲು ಬರುವುದಿಲ್ಲ: ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಆಟಗಾರ ಎಬಿಡಿ ವಿಲಿಯರ್ಸ್ ರೀತಿ ನವೀನ ಹೊಡೆತಗಳನ್ನು...

ಎಬಿಡಿ ವಿಲಿಯರ್ಸ್ ರೀತಿ ಹೊಸಹೊಸ ಹೊಡತೆಗಳನ್ನು ಬಾರಿಸಲು ಬರುವುದಿಲ್ಲ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್
Published On :
ಬೆಂಗಳೂರು: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಆಟಗಾರ ಎಬಿಡಿ ವಿಲಿಯರ್ಸ್ ರೀತಿ ನವೀನ ಹೊಡೆತಗಳನ್ನು ಸಿಡಿಸಿಲು ನನಗೆ ಬರುವುದಿಲ್ಲ ಎಂದು ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ನಾನು ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ಆಡಬಲ್ಲೆ. ಆದರೆ ಎಬಿಡಿ ವಿಲಿಯರ್ಸ್ ರೀತಿ ವಿಶೇಷ ಹೊಡೆತಗಳನ್ನು ಬಾರಿಸಲು ಬರುವುದಿಲ್ಲ. ನಾನು ನನ್ನದೇ ಆದ ಮಾರ್ಗದಲ್ಲಿ ಆಡುತ್ತೇನೆ. ಎಬಿಡಿ ಎಲ್ಲಾ ವಿಧದ ಹೊಡೆತಗಳನ್ನು ಆಡುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ನಾನು ಅವರಿಗೆ ಅನುಗುಣವಾಗಿ ನನ್ನ ಆಟವನ್ನು ಹೊಂದಿಸಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 
ನಾನು ಸುರಕ್ಷಿತವಾಗಿ ಆಡುತ್ತಿದ್ದೇನೆಂದು ಜನರು ಹೇಳುತ್ತಾರೆ. ಆದರೆ ಎಬಿಡಿಯಂತೆ ವಿಶೇಷ ಹೊಡೆತಗಳನ್ನು ಸಿಡಿಸಲು ಪ್ರಯತ್ನಿಸಲು ನಾನು ಪರಿಣಿತನಲ್ಲ. ನಾನು ಆ ಹೊಡೆತಗಳನ್ನು ಅಭ್ಯಾಸ ಮಾಡಲಿಲ್ಲ. ಎಂದಿಗೂ ಅದನ್ನು ಪ್ರಯತ್ನಿಸುವುದಿಲ್ಲ. ಎಬಿಡಿಯ ವಿಶೇಷ ಹೊಡೆತಗಳು ಅವರ ಪ್ರತಿಭೆಯನ್ನು ತೋರಿಸುತ್ತದೆ. ಮುಂದೆ ನಾನು ನನ್ನ ಸಾಮರ್ಥ್ಯ ಮತ್ತು ಸಾಂಪ್ರದಾಯಿಕ ಕ್ರಿಕೆಟ್ ಹೊಡೆತಗಳನ್ನು ಬಾರಿಸುವ ವಿಷಯಕ್ಕೆ ಅಂಟಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 
ಆರ್ಸಿಬಿ ತಂಡದಲ್ಲಿ ಆಡುತ್ತಿರುವ ಎಬಿಡಿ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟ್ಸ್ ಮನ್ ಗಳು ತಮ್ಮ ವಿಭಿನ್ನ ಹೊಡೆತಗಳ ಮೂಲಕ ತಮ್ಮದೇ ಆದ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.