ಮೈದಾನದಲ್ಲೇ ಧೋನಿ-ಯುವಿ 'ಬ್ರೊಮ್ಯಾನ್ಸ್', ವಿಡಿಯೋ ವೈರಲ್!
ಮೊಹಾಲಿಯಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಸೊಂಟದ ನೋವಿನಿಂದ ಬಳಲುತ್ತಿದ್ದ ಧೋನಿ ಅವರನ್ನು ಯುವಿ ಪ್ರೋತ್ಸಾಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Published On :
ಮೊಹಾಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ನಡುವಿನ ಸ್ನೇಹಕ್ಕೆ ಮತ್ತೊಂದು ಸಾಕ್ಷಿ ದೊರೆತಿದ್ದು, ಮೊಹಾಲಿಯಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಸೊಂಟದ ನೋವಿನಿಂದ ಬಳಲುತ್ತಿದ್ದ ಧೋನಿ ಅವರನ್ನು ಯುವಿ ಪ್ರೋತ್ಸಾಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯದ ನಡುವೆ ಧೋನಿ ಸೊಂಟದ ನೋವಿಗೆ ತುತ್ತಾಗಿದ್ದರು. ಈ ವೇಳೆ ಧೋನಿ ಬಳಿ ಬಂದ ಯುವಿ ನಿನಗೇನೂ ಆಗಿಲ್ಲ. ಏಳು ಮೇಲೆ ಎಂಬರ್ಥದಲ್ಲಿ ತಲೆ ಹಿಡಿದು ಬಗ್ಗಿಸಿದರು. ಈ ವೇಳೆ ಧೋನಿ ಕೂಡ ನಗುತ್ತಲೇ ಮೇಲೆದ್ದರು.
ಇನ್ನು ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತೀವ್ರ ಸೊಂಟದ ನೋವಿನ ನಡುವೆಯೇ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು. ಅಂತಿಮ ಎಸೆತದವರೆಗೂ ಧೋನಿ ಕ್ರೀಸ್ ನಲ್ಲಿದ್ದರಾದರೂ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಧೋನಿ ಕೇವಲ 44 ಎಸೆತಗಳಲ್ಲಿ ಅಜೇಯ 79 ರನ್ ಸಿಡಿಸಿದ್ದರು. ಆದರೆ ಆ ಪಂದ್ಯವನ್ನು ಚೆನ್ನೈ ತಂಡ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತವಾಗಿ ಸೋತಿತು.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಧೋನಿ, ಬೆನ್ನು ನೋವು ತೀವ್ರತರವಾಗಿತ್ತು ನಿಜ. ಆದರೆ ಆ ದೇವರು ನನಗೆ ಅದನ್ನು ತಡೆದುಕೊಳ್ಳುವ ಶಕ್ತಿ ನೀಡಿದ್ದ. ಬೆನ್ನು ನೋವಿದ್ದರೆ ಏನು ಕೈಯಲ್ಲಿ ಶಕ್ತಿ ಇತ್ತಲ್ಲ ಎಂದು ತಮ್ಮ ಅದ್ಬುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಧೋನಿ ಸಂತಸದ ಮಾತನಾಡಿದ್ದಾರೆ. ಅಂತೆಯೇ ಬೆನ್ನು ನೋವಿನ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಅದೇನು ಅಂತಹ ಗಂಭೀರ ನೋವೇನೂ ಅಲ್ಲ. ನೀವು ನಿಮ್ಮ ನೋವನ್ನು ಗಂಭೀರವಾಗಿ ಪರಿಗಣಿಸಿದರೆ ಅದು ಇನ್ನೂ ದೊಡ್ಡದಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


