ಕ್ರಿಕೆಟ್

ಕ್ರಿಸ್ ಗೇಲ್ ಬಂದಿದ್ದಾರೆ ಎಚ್ಚರ...!: ಎದುರಾಳಿ ಐಪಿಎಲ್ ತಂಡಗಳಿಗೆ ಕೆಎಲ್ ರಾಹುಲ್

ಹೊಡೆ ಬಡಿ ದಾಂಡಿಗ ಕ್ರಿಸ್ ಗೇಲ್ ಮತ್ತೆ ಬಂದಿದ್ದಾರೆ... ಅವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕನ್ನಡಿಗ, ಕಿಂಗ್ಸ್ ಎಲೆವನ್....

ಕ್ರಿಸ್ ಗೇಲ್ ಬಂದಿದ್ದಾರೆ ಎಚ್ಚರ...!: ಎದುರಾಳಿ ಐಪಿಎಲ್ ತಂಡಗಳಿಗೆ ಕೆಎಲ್ ರಾಹುಲ್
ಕೆಎಲ್ ರಾಹುಲ್
Published On :
ಮೊಹಾಲಿ: ಹೊಡಿ ಬಡಿ ದಾಂಡಿಗ ಕ್ರಿಸ್ ಗೇಲ್ ಮತ್ತೆ ಬಂದಿದ್ದಾರೆ... ಅವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕನ್ನಡಿಗ, ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಅವರು ಐಪಿಎಲ್ ನ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ ರಾತ್ರಿ ನಡೆದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕ್ರಿಸ್ ಗೇಲ್ ಎರಡನೇ ಅತಿ ವೇಗದ ಅರ್ಧ ಶತಕ ದಾಖಲಿಸುವ ಮೂಲಕ ಕಿಂಗ್ಸ್ ಇಲೆವನ್‌ ಪಂಜಾಬ್ ಗೆಲುವಿಗೆ ಕಾರಣರಾದರು.
ಕ್ರಿಸ್ ಗೇಲ್ ಬಂದಿರುವುದು ನಮಗೆ ಅದ್ಭುತ ಸುದ್ದಿ. ಆದರೆ ಎದುರಾಳಿ ತಂಡಕ್ಕೆ ಇದೊಂದು ಕೆಟ್ಟ ಸುದ್ದಿ. ಏಕೆಂದರೆ ಕ್ರಿಸ್ ಒಬ್ಬರೇ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಕ್ರಿಸ್ ನಿನ್ನೆ ಅದನ್ನೇ ಮಾಡಿದ್ದಾರೆ ಎಂದು ಪಂದ್ಯದ ನಂತರ ನಡೆದ ಮಾಧ್ಯಮ ಸಂವಾದದಲ್ಲಿ ರಾಹುಲ್ ಹೇಳಿದ್ದಾರೆ.
ಕ್ರಿಸ್ ಗೇಲ್ ಅವರು ಮುಂದೆಯೂ ಇದೇ ರೀತಿ ಹೊಡಿ ಬಡಿ ಆಟವನ್ನು ಪ್ರದರ್ಶಿಸಬೇಕು ಬೇಕು ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಅವರು ಈ ಹಿಂದೆ ಆರ್ ಸಿಬಿಯ ಸದಸ್ಯರಾಗಿದ್ದವರು. ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೂಡು ಸೇರಿಕೊಂಡಿದ್ದಾರೆ. ಗೇಲ್ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಬಾಲ್ ಗಳಲ್ಲಿ 63 ರನ್ ಸಿಡಿಸಿದರೆ ರಾಹುಲ್ ಮತ್ತೊಮ್ಮೆಅದ್ಭುತ ಆಟವಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.