ಕ್ರಿಕೆಟ್

ಇದು ಆರ್‌ಸಿಬಿ ಗೀತೆ: ಯೂಟ್ಯೂಬ್‌ನಲ್ಲಿ ದೂಳೆಬ್ಬಿಸಿದ ಹಾಡು

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆರಂಭಕ್ಕೆ ಇನ್ನೂ ಎರಡು ದಿನಗಳು ಬಾಕಿಯಿದ್ದು ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವನ್ನು ಉತ್ತೇಜಿಸುವ...

ಇದು ಆರ್‌ಸಿಬಿ ಗೀತೆ: ಯೂಟ್ಯೂಬ್‌ನಲ್ಲಿ ದೂಳೆಬ್ಬಿಸಿದ ಹಾಡು
ವಿರಾಟ್ ಕೊಹ್ಲಿ
Published On :
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಆರಂಭಕ್ಕೆ ಇನ್ನೂ ಎರಡು ದಿನಗಳು ಬಾಕಿಯಿದ್ದು ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವನ್ನು ಉತ್ತೇಜಿಸುವ ಸಲುವಾಗಿ ಆರ್ಸಿಬಿ ಗೀತೆಯೊಂದನ್ನು ಬಿಡುಗಡೆ ಮಾಡಲಾಗಿದೆ. 
ನಮ್ಮ ಕರ್ನಾಟಕ ಮೆಮೆಸ್ ತಂಡ ಆರ್ಸಿಬಿ ಗೀತೆಯೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು ಈ ಗೀತೆ ಇದೀಗ ಆರ್ಸಿಬಿ ಅಭಿಮಾನಿಗಳನ್ನು ಸೆಳೆಯುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಈ ಗೀತೆ 2.5 ಲಕ್ಷ ಹಿಟ್ಸ್ ಸಿಕ್ಕಿದೆ. ಇನ್ನು ಮೊದಲ ದಿನ ನಂಬರ್ 1 ಟ್ರೆಂಡಿಗ್ ನಲ್ಲಿತ್ತು. 
ಆರ್ಸಿಬಿ ಹಾಡನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಾ ಮುತ್ತ ಚಿತ್ರೀಕರಿಸಲಾಗಿದೆ. ಇನ್ನು ಹಾಡಿನ ಬಗ್ಗೆ ಮಾತನಾಡಿರುವ ಹಾಡಿನ ನಿರ್ದೇಶಕ ಪವನ್ ಜೆಡಿ ಅವರು ಆರ್ಸಿಬಿಗಾಗಿ ಪ್ರತ್ಯೇಕವಾದ ಕನ್ನಡ ಹಾಡು ಇರಲಿಲ್ಲ. ತಂಡವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ನಾವು ಆರ್ಸಿಬಿ ಗೀತೆಯನ್ನು ರೆಡಿ ಮಾಡಿದೇವು. ಕಳೆದ ವರ್ಷವೇ ಈ ಹಾಡನ್ನು ರೆಡಿ ಮಾಡಲಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನದಿಂದಾಗಿ ಬಿಡುಗಡೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 
ಈ ಹಾಡಿಗೆ ರ್ಯಾಪರ್ ಸಿದ್ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಜತೆಗೆ ಸಂಕಲನವನ್ನು ಸಹ ಸಿದ್ ಅವರವೇ ಮಾಡಿದ್ದಾರೆ. ಆಪರೇಷನ್ ಅಲಮೇಲಮ್ಮ ಚಿತ್ರದ ತಿಳಿ ಸಂಜೆ ಹಾಡು ಬರೆದಿದ್ದ ನಾಗರ್ಜುನ್ ಶರ್ಮಾ ಗೀತೆ ರಚನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.