ಕ್ರಿಕೆಟ್

ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಒತ್ತಡವಿದೆ: ಮನೀಶ್ ಪಾಂಡೆ

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಇದ್ದು ಅದರಲ್ಲೂ ಮಧ್ಯಮ ಕ್ರಮಾಕಂದಲ್ಲಿ ಆಡುವಾಗ ಒತ್ತಡ ಎದುರಿಸುವುದು ಸಹಜ ಎಂದು ಮನೀಶ್ ಪಾಂಡೆ ತಿಳಿಸಿದ್ದಾರೆ...

ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಒತ್ತಡವಿದೆ: ಮನೀಶ್ ಪಾಂಡೆ
ಮನೀಶ್ ಪಾಂಡೆ
Published On :
ಬೆಂಗಳೂರು: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಇದ್ದು ಅದರಲ್ಲೂ ಮಧ್ಯಮ ಕ್ರಮಾಕಂದಲ್ಲಿ ಆಡುವಾಗ ಒತ್ತಡ ಎದುರಿಸುವುದು ಸಹಜ ಎಂದು ಮನೀಶ್ ಪಾಂಡೆ ತಿಳಿಸಿದ್ದಾರೆ. 
ನಾನು ತಂಡದಲ್ಲಿ ಹೆಚ್ಚು ಪಂದ್ಯಗಳನ್ನಾಡಲು ಇಚ್ಛಿಸುತ್ತೇನೆ. ಇನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಎರಡು ಅರ್ಧ ಶತಕ ಸಿಡಿಸಿ ಮಿಂಚಿದ್ದ ನಾನು ಆಸೀಸ್ ವಿರುದ್ಧದ ಆರಂಭಿಕ ಎರಡೂ ಪಂದ್ಯಗಳಲ್ಲೂ ವಿಫಲನಾಗಿದ್ದು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡವಿದೆ ಎಂದು ಪಾಂಡೆ ಹೇಳಿದ್ದಾರೆ. 
ಚೆನ್ನೈ ಹಾಗೂ ಕೋಲ್ಕತ್ತದಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಪಾಂಡೆ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಬೇಕಾಗಿದೆ. 3ನೇ ಕ್ರಮಾಂಕದಿಂದ 4 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುವಾಗ ಸಾಕಷ್ಟು ವ್ಯತ್ಯಾಸ ಕಾಣುತ್ತವೆ. ಇದಕ್ಕೆ ಮಾನಸಿಕವಾಗಿಯೂ ಸಿದ್ಧರಿರಬೇಕಾಗುತ್ತದೆ. ಇದೂ ಕೂಡ ಒತ್ತಡಕ್ಕೆ ಕಾರಣ ಎಂದು ಮನೀಶ್ ಪಾಂಡೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.