ಕ್ರಿಕೆಟ್

ವಿಕೆಟ್ ಹಿಂದೆ ತಾವೇ 'ಕಿಂಗ್' ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಎಂಎಸ್ ಧೋನಿ!

ಸ್ಟಂಪಿಂಗ್ ಮೂಲಕ ಈಗಾಗಲೇ ವಿಶ್ವದಾಖಲೆ ನಿರ್ಮಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಾವು ವಿಕೆಟ್ ಹಿಂದಿನ ಕಿಂಗ್...

ವಿಕೆಟ್ ಹಿಂದೆ ತಾವೇ 'ಕಿಂಗ್' ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಎಂಎಸ್ ಧೋನಿ!
ಎಂಎಸ್ ಧೋನಿ
Published On :
ಕೋಲ್ಕತ್ತಾ: ಸ್ಟಂಪಿಂಗ್ ಮೂಲಕ ಈಗಾಗಲೇ ವಿಶ್ವದಾಖಲೆ ನಿರ್ಮಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಾವು ವಿಕೆಟ್ ಹಿಂದಿನ ಕಿಂಗ್ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೇಲ್ ಅವರನ್ನು ಅಚ್ಚರಿಯ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಪಂದ್ಯದ 23 ಓವರ್ ನ ಅನ್ನು ಭಾರತದ ಚಾಹಲ್ ಬೌಲ್ ಮಾಡುತ್ತಿದ್ದರು. ಓವರ್ ನ 4ನೇ ಎಸೆತದಲ್ಲಿ ಚಾಹಲ್ ಎಸೆದ ಚೆಂಡು ತಿರುವು ಪಡೆಯುತ್ತಿದ್ದಂತೆಯೇ ಗ್ಲೇನ್ ಮ್ಯಾಕ್ಸ್ ವೇಲ್ ಫ್ರಂಟ್ ಫುಟ್ ಮೂಲಕ ಅದನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದಾರೆ. ಈ ವೇಳೆ ಚೆಂಡು ಅವರ ಕಾಲಿನ ಕೆಳಗೆ ನುಗ್ಗಿ ಧೋನಿ ಕೈಸೇರಿತು ಕೂಡಲೇ ಡೈವ್ ಮಾಡುವ ಮೂಲಕ ಸ್ಟಂಪ್ ಮಾಡಿದರು.
ಕ್ರಿಸ್ ನಿಂದ ದೂರ ಹೋಗಿದ್ದ ಮ್ಯಾಕ್ಸ್ ವೇಲ್ ಅಂಪೈರ್ ಅವರ ತೀರ್ಪಿಗೂ ಮುನ್ನ ಅಲ್ಲಿಂದ ಹೊರನಡೆದರು. ಇದು ಧೋನಿ ಅವರ 102ನೇ ಸ್ಟಂಪಿಂಗ್ ಆಗಿದೆ. ಈ ಹಿಂದೆ 100 ಸ್ಟಂಪಿಂಗ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಹೆಸರಿಲ್ಲಿದ್ದ ದಾಖಲೆಯನ್ನು ಧೋನಿ ಮುರಿದಿದ್ದು, ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.