ಆರಂಭಿಕ ಆಘಾತದ ನಡುವೆಯೂ ಪುಟಿದೆದ್ದ ಟೀಂ ಇಂಡಿಯಾ 281/7
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 281 ರನ್ ಗಳನ್ನು ಪೇರಿಸಿದ್ದು ಆಸ್ಟ್ರೇಲಿಯಾಗೆ ಗೆಲ್ಲಲು 282 ರನ್ ಗುರಿ ನೀಡಿದೆ.

Published On :
ಚೆನ್ನೈ: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 281 ರನ್ ಗಳನ್ನು ಪೇರಿಸಿದ್ದು ಆಸ್ಟ್ರೇಲಿಯಾಗೆ ಗೆಲ್ಲಲು 282 ರನ್ ಗುರಿ ನೀಡಿದೆ.
ಚೆನ್ನೈನ ಚಿದಂಬರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಕೇವಲ 41 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಜೋಡಿ ಶತಕದ ಜತೆಯಾಟದಿಂದಾಗಿ ಭಾರತ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ಭಾರತ ಪರ ಅಜಿಂಕ್ಯ ರಹಾನೆ 5, ರೋಹಿತ್ ಶರ್ಮಾ 28, ವಿರಾಟ್ ಕೊಹ್ಲಿ 0, ಮನೀಶ್ ಪಾಂಡೆ 0, ಕೇದಾರ್ ಜಾದವ್ 40, ಹಾರ್ದಿಕ್ ಪಾಂಡ್ಯ 83 ರನ್ ಸಿಡಿಸಿದ್ದಾರೆ. ಇನ್ನು ಎಂಎಸ್ ಧೋನಿ 79, ಭುವನೇಶ್ವರ್ ಕುಮಾರ್ ಅಜೇಯ 32 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಕೋಲ್ಟರ್ ನೈಲ್ 3, ಸ್ಟೊಯಿನಿಸ್ 2 ಹಾಗೂ ಜಂಪಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaMS DhoniChennaiಚೆನ್ನೈಎಂಎಸ್ ಧೋನಿHardik Pandyaಹಾರ್ದಿಕ್ ಪಾಂಡ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


