ಮೈದಾನದಲ್ಲಿ ಅಂಪೈರ್‌ರಂತೆ ಬಾಂಗ್ಲಾ ಆಟಗಾರನಿಂದ ಹಾಸ್ಯಾತ್ಮಕ ಅಣುಕು
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರ ನಾಸಿರ್ ಹುಸೇನ್ ಮೈದಾನದಲ್ಲಿ ಅಂಪೈರ್ ರನ್ನು ಅಣುಕು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ...

Published On :
ಢಾಕಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರ ನಾಸಿರ್ ಹುಸೇನ್ ಮೈದಾನದಲ್ಲಿ ಅಂಪೈರ್ ರನ್ನು ಅಣುಕು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಮೈದಾನದಲ್ಲಿ ಕ್ರಿಕೆಟ್ ಆಟಗಾರರ ನಡವಳಿಕೆಗಳು ಹೇಗಿರಬೇಕು ಎಂಬ ಪ್ರಶ್ನೆಗಳನ್ನು ಈ ಘಟನೆ ಪ್ರಶ್ನಿಸಿದೆ. ಆಸ್ಟ್ರೇಲಿಯಾ ಬ್ಯಾಟಿಂಗ್ ನಲ್ಲಿ 364 ರನ್ ಗಳಿಸಿದ್ದಾಗ ಆಸೀಸ್ ಪರ ಆಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ಎಲ್ಬಿಡಬ್ಲ್ಯೂ ಬಲೆಗೆ ಬೀಳುತ್ತಾರೆ. ಈ ವೇಳೆ ಅಂಪೈರ್ ನಿಗೆಲ್ ಲಾಂಗ್ ನಾಟ್ ಔಟ್ ತೀರ್ಪು ನೀಡುತ್ತಾರೆ.
ಅಂಪೈರ್ ತೀರ್ಪನ್ನು ಬಾಂಗ್ಲಾದೇಶ ಆಟಗಾರರು ಪ್ರಶ್ನಿಸುತ್ತಾರೆ. ಇದನ್ನು ಪರಮರ್ಶಿಸಿದ ಮೂರನೇ ಅಂಪೈರ್ ಮೈದಾನದ ಅಂಪೈರ್ ಗೆ ಔಟ್ ಎಂದು ತಿಳಿಸುತ್ತಾರೆ. ಆಗ ನಿಗಲ್ ಲಾಂಗ್ ತಮ್ಮ ತೀರ್ಪೀಗೆ ಕ್ಷಮೆಯಾಚಿಸಿ ಔಟ್ ಎಂದು ತೀರ್ಪು ನೀಡುತ್ತಾರೆ. ಆಗ ಬಾಂಗ್ಲಾದೇಶದ ಆಟಗಾರ ನಿಗಲ್ ಲಾಂಗ್ ರನ್ನು ಅಣುಕಿಸುವಂತೆ ಮಾಡುತ್ತಾರೆ. ಈ ಘಟನೆ ಆಟಗಾರ ಅಸಭ್ಯವರ್ತನೆಗೆ ಸಾಕ್ಷಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಇತಿಹಾಸ ಸೃಷ್ಠಿಸುವ ಅವಕಾಶವನ್ನು ಬಾಂಗ್ಲಾದೇಶ ಕಳೆದುಕೊಂಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾAustraliaಬಾಂಗ್ಲಾದೇಶBangladeshNasir HossainPat Cumminsನಾಸೀರ್ ಹುಸೇನ್ಪ್ಯಾಟ್ ಕಮ್ಮಿನ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


