ಕ್ರಿಕೆಟ್

ಕ್ರಿಕೆಟ್: ಅಸ್ಸಾಂನಲ್ಲಿ ತಯಾರಾಗಿದೆ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ

ಏಳು ವರ್ಷಗಳ ನಂತರ, ಈಶಾನ್ಯ ರಾಜ್ಯದಲ್ಲಿ ಮತ್ತೆ ಅಂತರಾಷ್ಟ್ರೀಯ ಪಂದ್ಯವು ನಡೆಯಲಿದೆ.

ಕ್ರಿಕೆಟ್: ಅಸ್ಸಾಂನಲ್ಲಿ ತಯಾರಾಗಿದೆ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ
ಬಾರ್ಸಪರಾ ಕ್ರೀಡಾಂಗಣ
Published On :
ಗೌಹಾಟಿ: ಏಳು ವರ್ಷಗಳ ನಂತರ,  ಈಶಾನ್ಯ ರಾಜ್ಯದಲ್ಲಿ ಮತ್ತೆ ಅಂತರಾಷ್ಟ್ರೀಯ ಪಂದ್ಯವು ನಡೆಯಲಿದೆ. ಈ ಬಾರಿ ಹೊಸದಾಗಿ ನಿರ್ಮಿಸಲಾದ ಬರ್ಸಾಪರಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಅಂತರರಾಷ್ಟ್ರೀಯ ಪಂದ್ಯ ಆಯೋಜಿತವಾಗಿದೆ.
ಅಸ್ಸಾಂನಲ್ಲಿ ಸಾಮಾನ್ಯವಾಗಿ ಸಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಮಿತವಾಗಿ ಮಳೆ ಆಗುತ್ತದೆ.ಅದೇ ರೀತಿ ಆಗಾಗ ಪ್ರವಾಹಗಳು ಉಂಟಾಗುತ್ತದೆ. ಆದರೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಉಪಾಧ್ಯಕ್ಷ ದೇವಜಿತ್ ಲೋನ್ ಸೈಕಿಯ ಅವರು ಕ್ರೀಡಾಂಗಣದಲ್ಲಿನ ಒಳಚರಂಡಿ ಸೌಕರ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ ಗಿಂತ ಉತ್ತಮವಾಗಿವೆ ಎಂದು ಹೇಳಿದ್ದಾರೆ.
"ಮಳೆ ಪ್ರಾರಂಭವಾದ ಅರ್ಧ ಗಂಟೆಯೊಳಗೆ ನಿಂತು ಹೋಗುತ್ತದೆ, ಹೀಗಾಗಿ ನಮಗೆ ಪಂದ್ಯಕ್ಕೆ ಯಾವ ಅಡಚಣೆ ಆಗುವುದಿಲ್ಲ. ನಾವು ಈಡನ್ ಗಾರ್ಡನ್ ಗಿಂತ ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದೇವೆ" ಸೈಕಿಯಾ ಫೋನ್ ಮೂಲಕ ಐಎಎನ್ಎನ್ ಗೆ  ತಿಳಿಸಿದ್ದಾರೆ
ಆದರೆ ಹೊಸ ಕ್ರೀಡಾಂಗಣವು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ಅಂತಿಮಗೊಳ್ಳಬೇಕಿದೆ, ಭಾರತೀಯ ಕ್ರಿಕೆಟ್ ಮಂದಳಿ (ಬಿಸಿಸಿಐ) ಸೆಪ್ಟೆಂಬರ್ 17 ರಿಂದ ಪ್ರಋಆಮ್ಭಾಅಘೀ ಐದು ಏಕದಿನ ಪಂದ್ಯ ಮತ್ತು ಮೂರು ಟಿ 20 ಗಳನ್ನು ಒಳಗೊಂಡ ಸಡೆಯುವುದಾಗಿ ಘೋಷಿಸಿದೆ.
ಅಸ್ಸಾಂ ನಲ್ಲಿನ ಪಂದ್ಯಕ್ಕೆ ತಾತ್ಕಾಲಿಕ ದಿನಾಂಕ ಅಕ್ಟೋಬರ್ 10. ಎಂದು ನಿರ್ಧರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.