ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯದ ಸುಳಿವು ನೀಡಿದ ಲಸಿತ್ ಮಲಿಂಗಾ

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಕಳಪೆ ಪ್ರದರ್ಶನ ನೀಡಿದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸುಳಿವು ನೀಡಿದ್ದಾರೆ...

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯದ ಸುಳಿವು ನೀಡಿದ ಲಸಿತ್ ಮಲಿಂಗಾ
ಲಸಿತ್ ಮಲಿಂಗಾ
Published On :
ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಕಳಪೆ ಪ್ರದರ್ಶನ ನೀಡಿದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸುಳಿವು ನೀಡಿದ್ದಾರೆ. 
ಕಾಲಿನ ಗಾಯದ ಸಮಸ್ಯೆಯಿಂದ 19 ತಿಂಗಳ ನಂತರ ತಂಡಕ್ಕೆ ಮರಳಿದ್ದ ಲಸಿತ್ ಮಲಿಂಗಾ ಭಾರತ ವಿರುದ್ಧದ 4 ಏಕದಿನ ಪಂದ್ಯಗಳ ಪೈಕಿ ಬರೀ ಎರಡು ವಿಕೆಟ್ ಮಾತ್ರ ಪಡೆಯಲು ಸಫಲರಾಗಿದ್ದು ತಂಡದಲ್ಲಿ ಅವರ ಪಾತ್ರದ ಕುರಿತು ಪ್ರಶ್ನೆಗಳು ಎದ್ದಿವೆ. ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಸ್ವತಃ ಮಲಿಂಗಾ ಅವರೇ ಹಿಂದಿನ ಜಿಂಬಾಬ್ವೆ ಮತ್ತು ಭಾರತ ವಿರುದ್ಧದ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಕುರಿತು ನೋವು ವ್ಯಕ್ತಪಡಿಸಿದ್ದಾರೆ. 
ಗಾಯ ಸಮಸ್ಯೆಯಿಂದಾಗಿ ನಾನು 19 ತಿಂಗಳ ನಂತರ ತಂಡಕ್ಕೆ ಮರಳಿದ್ದೇನೆ. ಆದರೆ ಎರಡು ತಂಡಗಳ ವಿರುದ್ಧ ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ನಾನು ಈ ಸರಣಿಯ ನಂತರ ಎಲ್ಲಿದ್ದೇನೆಂದು ನೋಡುತ್ತೇನೆ. ಜತೆಗೆ ನನ್ನ ದೇಹವು ಎಷ್ಟು ಸಮಯದವರೆಗೆ ನನಗೆ ಆಡಲು ಸಹಕರಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಿ ನೋಡುತ್ತೇನೆ ಎಂದು ಹೇಳಿದ್ದಾರೆ. 
ನಾನು ಅನುಭವಿ ಆಟಗಾರ ಎಂಬುದು ಇಲ್ಲಿ ಮುಖ್ಯವಲ್ಲ, ತಂಡಕ್ಕಾಗಿ ನಾನು ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ತಂಡದಲ್ಲಿ ನನ್ನ ಅಗತ್ಯವೆನಿದೆ. ಮುಂದೆ ನನಗೆ ಎಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೆ ನೋಡುತ್ತೇನೆ. ಆ ಪಂದ್ಯಗಳಲ್ಲಿ ನನ್ನ ಶರೀರ ನನಗೆ ಎಷ್ಟು ಸಹಕರಿಸುತ್ತದೆ ಎಂದು ಪರೀಕ್ಷಿಸುತ್ತೇನೆ. ಒಂದು ವೇಳೆ ನಾನು ದಣಿದಿದ್ದೇನೆ ಎಂಬುದು ಮನದಟ್ಟಾದರೆ, ಖುಷಿಯಾಗಿ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುತ್ತೇನೆ ಎಂದು ಲಸಿತ್ ಮಲಿಂಗಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.