ಕ್ರಿಕೆಟ್

ಬಾಲಿವುಡ್‌ನಲ್ಲಿ ಚಿತ್ರವಾಗುತ್ತಿದೆ 1983ರ ಏಕದಿನ ವಿಶ್ವಕಪ್ ದಿಗ್ವಿಜಯ

1983ರಲ್ಲಿ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದನ್ನು ವಸ್ತುವಾಗಿಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾ...

ಬಾಲಿವುಡ್‌ನಲ್ಲಿ ಚಿತ್ರವಾಗುತ್ತಿದೆ 1983ರ ಏಕದಿನ ವಿಶ್ವಕಪ್ ದಿಗ್ವಿಜಯ
ಕಪಿಲ್ ದೇವ್
Published On :
ಮುಂಬೈ: 1983ರಲ್ಲಿ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದನ್ನು ವಸ್ತುವಾಗಿಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 
ಚಿತ್ರಕ್ಕೆ 83 ಎಂದು ಹೆಸರಿಡಲಾಗಿದ್ದು ಫ್ಯಾಂಟಮ್ ಫಿಲ್ಮಸ್, ರಿಲೈಯನ್ಸ್ ಎಂಟರ್ ಟೈನ್ ಮೆಂಟ್ ಮತ್ತು ಬಾರ್ಟಲ್ ಹೆಗಾರ್ಟಿ ಸಂಸ್ಥೆಗಳು ನಿರ್ಮಾಣಕ್ಕೆ ಕೈಜೋಡಿಸಿವೆ. ಚಿತ್ರಕ್ಕೆ ರಣವೀರ್ ಸಿಂಗ್ ನಾಯಕನಾಗಿದ್ದರೆ ಕಬೀರ್ ಖಾನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 
1983ರಲ್ಲಿ ಟೀಂ ಇಂಡಿಯಾ ಯಾರೂ ನಿರೀಕ್ಷಿಸದ ರೀತಿಯಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು. ಕ್ರಿಕೆಟ್ ಶಿಶು ಎಂದು ಕರೆಸಿಕೊಂಡಿದ್ದ ಭಾರತ ತಂಡ ವಿಶ್ವಕಪ್ ವೇಳೆ ಜಿಗಿದೆದ್ದ ರೀತಿ ಕ್ರಿಕೆಟ್ ಇತಿಹಾಸದಲ್ಲೇ ಒಂದು ಮಹತ್ವದ ಅಧ್ಯಾಯವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.