ಕೊಹ್ಲಿ ಪ್ರಶಂಸೆಗೆ ಪಾಕ್ ಬೌಲರ್ ಮಹಮದ್ ಆಮೀರ್ ಹೇಳಿದ್ದೇನು?
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡ ವೇಗಿ ಮಹಮದ್ ಆಮೀರ್ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಗೆ ಒಂದೇ ಒಂದು ಅವಕಾಶ ನೀಡಿದರೂ ಪಂದ್ಯವನ್ನು ಕಸಿಯುತ್ತಾರೆ ಎಂದು ಹೇಳಿದ್ದಾರೆ.

Published On :
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡ ವೇಗಿ ಮಹಮದ್ ಆಮೀರ್ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಗೆ ಒಂದೇ ಒಂದು ಅವಕಾಶ ನೀಡಿದರೂ ಪಂದ್ಯವನ್ನು ಕಸಿಯುತ್ತಾರೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಆಮೀರ್ ಖಾನ್ ನಡೆಸಿದ ಸಂದರ್ಶನದಲ್ಲಿ ಮೊಹಮ್ಮದ್ ಆಮೀರ್ ತಾವು ಎದುರಿಸಿದರ ಪೈಕಿ ಅತ್ಯಂತ ಕಠಿಣ ಬೌಲರ್ ಎಂದು ಕೋಹ್ಲಿ ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದಕ್ಕೆ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿರುವ ಮಹಮದ್ ಆಮೀರ್, "ಕೋಹ್ಲಿ ಪ್ರಶಂಸೆಯಿಂದ ಅತ್ಯಂತ ಖುಷಿಯಾಗುತ್ತಿದೆ. ಕೋಹ್ಲಿ ಶ್ರೇಷ್ಠ ಕ್ರಿಕೆಟಿಗ ಎಂಬುದು ಜಗತ್ತಿಗೆ ಗೊತ್ತು. ಅವರ ವಿರುದ್ಧ ನಿಮ್ಮ ಸರ್ವಶ್ರೇಷ್ಠ ಪ್ರದರ್ಶನ ನೀಡಬೇಕಾಗುತ್ತದೆ. ಅವರಿಗೆ ಒಂದು ಅವಕಾಶವನ್ನು ನೀಡಿದರೂ ತಕ್ಷಣವೇ ಪಂದ್ಯವನ್ನು ನಿಮ್ಮಿಂದ ಕಸಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅಂತೆಯೇ ಪ್ರತಿ ಬಾರಿಯೂ ಕೊಹ್ಲಿ ವಿರುದ್ಧ ಬೌಲಿಂಗ್ ಮಾಡುವಾಗ ಆದಷ್ಟು ಬೇಗನೇ ಅವರನ್ನು ಔಟ್ ಮಾಡುವುದು ನನ್ನ ಗುರಿಯಾಗಿರುತ್ತದೆ. ಚೇಸಿಂಗ್ ವೇಳೆ ಅವರ ಸ್ಟ್ರೈಕ್ ರೇಟ್ ಮತ್ತು ಸರಾಸರಿಯು ವಿಶ್ವದ ಯಾವುದೇ ಬೌಲರ್ ಗೆ ಸವಾಲಿನ ವಿಷಯವಾಗಿದೆ. ಕೋಹ್ಲಿ ವಿರುದ್ಧ ಉತ್ತಮವಾಗಿ ದಾಳಿ ಮಾಡಿದರೆ ಮಾತ್ರ ನೀವು ಅತ್ಯುತ್ತಮ ಬೌಲರ್ ಆಗಿ ಮೂಡಿಬರಲು ಸಾಧ್ಯ ಎಂದು ಆಮೀರ್ ಹೇಳಿದ್ದಾರೆ. ಅಂತೆಯೇ ಐಸಿಸಿ ವಿಶ್ವ ಟ್ವೆಂಟಿ-20 ಟೂರ್ನಿಯ ಸಂದರ್ಭದಲ್ಲಿ ನನಗೆ ಬ್ಯಾಟ್ ಕೊಡುಗೆಯಾಗಿ ನೀಡಿರುವುದು ಸ್ಮರಣೀಯ ಕ್ಷಣ ಎಂದು ಕೊಹ್ಲಿ ಜತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಐದು ವರ್ಷಗಳ ನಿಷೇಧದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದಾಗ ಆಮೀರ್ ಅವರನ್ನು ಕೋಹ್ಲಿ ಬೆಂಬಲಿಸಿದ್ದರು. ಅಲ್ಲಿಂದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಭಾರಿ ಪೈಪೋಟಿ ಎದುರಾಗಿದ್ದರೂ ಮೈದಾನ ಹೊರಗಡೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದರು. ಈ ಹಿಂದೆ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಇದೇ ಆಮೀರ್ ಎಸೆತದಲ್ಲಿ ಕೊಹ್ಲಿ ಬೇಗನೇ ಔಟ್ ಆಗಿದ್ದರು. ಇದು ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


