ಸಾರ್ಥಕದ ಆಟ: ಹುಟ್ಟುಹಬ್ಬದಂದೇ ತ್ರಿಶತಕ ಸಿಡಿಸಿದ ಪ್ರಶಾಂತ್ ಚೋಪ್ರಾ
ಹಿಮಾಚಲ ಪ್ರದೇಶದ ಆರಂಭಿಕ ಆಟಗಾರ ಪ್ರಶಾಂತ್ ಚೋಪ್ರಾ ತಮ್ಮ 25ನೇ ಹುಟ್ಟುಹಬ್ಬದ ದಿನವೇ ತ್ರಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ...

Published On :
ಧರ್ಮಶಾಲಾ: ಹಿಮಾಚಲ ಪ್ರದೇಶದ ಆರಂಭಿಕ ಆಟಗಾರ ಪ್ರಶಾಂತ್ ಚೋಪ್ರಾ ತಮ್ಮ 25ನೇ ಹುಟ್ಟುಹಬ್ಬದ ದಿನವೇ ತ್ರಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ರಣಜಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಪ್ರಶಾಂತ್ ಚೋಪ್ರಾ 338 ರನ್ ಬಾರಿಸಿ ಮಿಂಚಿದರು. ಧರ್ಮಾಶಾಲಾದಲ್ಲಿ ನಡೆಯುತ್ತಿರುವ ಈ ರಣಜಿ ಪಂದ್ಯದ ಮೊದಲ ದಿನ ಪ್ರಶಾಂತ್ 271 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ದ್ವಿತೀಯ ದಿನ ತ್ರಿಶತಕದ ಅಭಿಯಾನ ಪೂರ್ತಿಗೊಳಿಸಿದರು.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಜನ್ಮದಿನದಂದೇ ತ್ರಿಶತಕ ಸಿಡಿಸಿದ ಕೇವಲ 3ನೇ ಅದೃಷ್ಟಶಾಲಿಯಲ್ಲಿ ಪ್ರಶಾಂತ್ ಚೋಪ್ರಾ 2ನೇ ಭಾರತೀಯ ಆಟಗಾರನಾಗಿದ್ದಾರೆ.
ಇನ್ನು ರಣಜಿ ಇತಿಹಾಸದಲ್ಲಿ 300 ರನ್ ದಾಖಲಿಸಿದ 41ನೇ ಆಟಗಾರನಾಗಿ ಪ್ರಶಾಂತ್ ಚೋಪ್ರಾ ಹೊರಹೊಮ್ಮಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


