ಕ್ರಿಕೆಟ್

ತಮ್ಮ ‘ಬೆಟರ್ ಹಾಫ್’ ರಹಸ್ಯ ಬಯಲು ಮಾಡಿದ ಭುವನೇಶ್ವರ್ ಕುಮಾರ್

ಕೊನೆಗೂ ಟೀಂ ಇಂಡಿಯಾದ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ತಮ್ಮ ‘ಬೆಟರ್ ಹಾಫ್’

ತಮ್ಮ ‘ಬೆಟರ್ ಹಾಫ್’ ರಹಸ್ಯ ಬಯಲು ಮಾಡಿದ ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ - ನುಪುರ್ ನಗರ್
Published On :
ನವದೆಹಲಿ: ಕೊನೆಗೂ ಟೀಂ ಇಂಡಿಯಾದ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ತಮ್ಮ ‘ಬೆಟರ್ ಹಾಫ್’ ಯಾರೆಂದು ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.
ಭುವನೇಶ್ವರ್ ಕುಮಾರ್ ಅವರು ಕಳೆದ ಮೇ ತಿಂಗಳಲ್ಲಿ ತಾವು ಒಬ್ಬರೇ ಕುಳಿತ ಫೋಟೋವೊಂದನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿ, ಮೊದಲ ಬಾರಿಗೆ ತಮ್ಮ ಜೊತೆ ಡಿನ್ನರ್‌ಗೆ ಕುಳಿತಿರುವ ಪ್ರೇಯಸಿಯನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಹೇಳಿದ್ದರು. ಇದೀಗ ಐದು ತಿಂಗಳ ಬಳಿಕ ತಮ್ಮ ಬಾಳ ಸಂಗಾತಿ ನುಪುರ್ ನಗರ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.
ತಮ್ಮ ಬಾಳ ಸಂಗಾತಿಯಾಗುತ್ತಿರುವ ನುಪುರ್‌ನಗರ್ ಅವರೊಟ್ಟಿಗೆ ಇರುವ ಚಿತ್ರವನ್ನು ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದು, ಅದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ.
ಭುವನೇಶ್ವರ್‌ ಮತ್ತು ನುಪುರ್‌ ಪಂಚತಾರ ಹೊಟೇಲ್‌ವೊಂದರಲ್ಲಿ ಡಿನ್ನರ್‌ಗೆ ಕುಳಿತಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಆದರೆ ನುಪುರ್‌ ನಗರ್‌ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.