ಕ್ರಿಕೆಟ್

ನಾಗ್ಪುರ ಟೆಸ್ಟ್ ಮೊದಲ ಇನ್ನಿಂಗ್ಸ್: ಮುರಳಿ, ಪೂಜಾರ ಶತಕ; ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ಪ್ರವಾಸಿ ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 2 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿದೆ.

ನಾಗ್ಪುರ ಟೆಸ್ಟ್ ಮೊದಲ ಇನ್ನಿಂಗ್ಸ್: ಮುರಳಿ, ಪೂಜಾರ ಶತಕ; ಬೃಹತ್ ಮೊತ್ತದತ್ತ ಟೀಂ ಇಂಡಿಯಾ
ಟೀಂ ಇಂಡಿಯಾ
Published On :
ನಾಗ್ಪುರ: ಪ್ರವಾಸಿ ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 2 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿದೆ. 
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 205 ರನ್ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿದ್ದು 107 ರನ್ ಗಳ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 7 ರನ್ ಗಳಿಸಿದ್ದಾಗ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಜತೆಯಾದ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ 209 ರನ್ ಗಳ ಜತೆಯಾಟ ನೀಡಿದ್ದು ತಂಡ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಮುರಳಿ ವಿಜಯ್ 106 ರನ್ ಗಳಿಸಿ ಔಟಾದರೆ ಚೇತೇಶ್ವರ ಪೂಜಾರ ಅಜೇಯ 121 ರನ್ ಹಾಗೂ ವಿರಾಟ್ ಕೊಹ್ಲಿ ಅಜೇಯ 54 ರನ್ ಸಿಡಿಸಿ ಮೂರನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ.  
ಲಂಕಾ ಪರ ಕರುಣರತ್ನೆ 51, ಚಾಂಡಿಮಲ್ 57, ಡಿಕ್ಲೆಲ್ಲಾ 24 ಹಾಗೂ ಪೆರೆರಾ 15 ರನ್ ಗಳಿಸಿ ಔಟಾಗಿದ್ದಾರೆ. ಭಾರತ ಪರ ಆರ್ ಅಶ್ವಿನ್ 4, ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದಿದ್ದಾರೆ. 
ಮುರಳಿ ವಿಜಯ್ ಅವರ ಟೆಸ್ಟ್ ಕ್ರಿಕೆಟ್ ಬದುಕಿನ 10ನೇ ಶತಕವಾಗಿದ್ದರೆ ಚೇತೇಶ್ವರ ಪೂಜಾರದ್ದು 14ನೇ ಶತಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.