ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್: ಭೋಜನ ವಿರಾಮದ ವೇಳೆ ಶ್ರೀಲಂಕಾ 47/2
ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ ಒಟ್ಟು 27 ಓವರ್ ಗಳಲ್ಲಿ ಶ್ರೀಲಂಕಾ ಎರಡು ವಿಕೆಟ್ ಕಳೆದುಕೊಂದು 47 ರನ್ ಗಳಿಸಿದೆ.

Published On :
ನಾಗ್ಪುರ: ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ ಒಟ್ಟು 27 ಓವರ್ ಗಳಲ್ಲಿ ಶ್ರೀಲಂಕಾ ಎರಡು ವಿಕೆಟ್ ಕಳೆದುಕೊಂದು 47 ರನ್ ಗಳಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಶ್ರೀಲಂಕಾದ ಸದೀರಾ ಸಮರವಿಕ್ರಮಾ 13 ರನ್ ಗಳಿಸಿದಾಗ ಇಶಾಂತ್ ಶರ್ಮಾ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಲಾಹಿರು ತಿರಿಮನ್ನೆ 9 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಗೆ ಬಲಿಯಾದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಇಶಾಂತ್ ಶರ್ಮಾ, ರೋಹಿತ್ ಹಾಗೂ ಮುರಳಿ ವಿಜಯ್ ಆಟವಾಡುತ್ತಿದ್ದು ಶಮಿ, ಭುವನೇಶ್ವರ್ ಹಾಗೂ ಶಿಖರ್ ಧವನ್ ವಿರಾಮ ಪಡೆದಿದ್ದಾರೆ. ಅದೇ ವೇಳೆ ಶ್ರೀಲಂಕಾ ತಂಡದಲ್ಲಿ ಮೊದಲ ಟೆಸ್ಟ್ ನಲ್ಲಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತSri Lankaಶ್ರೀಲಂಕಾsecond TestIshant Sharmaಇಶಾಂತ್ ಶರ್ಮಾRavichandran Ashwinರವಿಚಂದ್ರನ್ ಅಶ್ವಿನ್Sadeera Samarawickramaದ್ವಿತೀಯ ಟೆಸ್ಟ್ಸದೀರಾ ಸಮರವಿಕ್ರಮಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


