ಕ್ರಿಕೆಟ್

ಶಾಸ್ತ್ರಿ, ಜೈಸಿಂಹ ಬಳಿಕ ಮತ್ತೊಮ್ಮೆ ಆ ಅಪೂರ್ವ ಸಾಧನೆ ಗೈದ ಚೇತೇಶ್ವರ ಪೂಜಾರ!

ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಅಪೂರ್ವ ಸಾಧನೆಯೊಂದನ್ನು ಸಾಧಿಸಿದ್ದಾರೆ.

ಶಾಸ್ತ್ರಿ, ಜೈಸಿಂಹ ಬಳಿಕ ಮತ್ತೊಮ್ಮೆ ಆ ಅಪೂರ್ವ ಸಾಧನೆ ಗೈದ ಚೇತೇಶ್ವರ ಪೂಜಾರ!
ಸಂಗ್ರಹ ಚಿತ್ರ
Published On :
ಕೋಲ್ಕತಾ: ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಅಪೂರ್ವ ಸಾಧನೆಯೊಂದನ್ನು ಸಾಧಿಸಿದ್ದಾರೆ.
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದೂ ದಿನಲೂ ಪೂಜಾರ ಬ್ಯಾಟಿಂಗ್ ನಡೆಸುವ ಮೂಲಕ ಈ ಸಾಧನೆ ಗೈದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.  ಮಳೆಯಿಂದಾಗಿ 2 ದಿನಗಳ ಆಟಕ್ಕೆ ತೊಂದರೆಯಾಗಿದ್ದ ಈ ಪಂದ್ಯದಲ್ಲಿ ಪೂಜಾರ ಮೊದಲ ದಿನ ಮೊದಲ ಸೆಷನ್ ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಅಂದು ಮಳೆಯಿಂದಾಗಿ ಆ ದಿನದ ಆಟ ರದ್ದಾಗಿತ್ತು. ಬಳಿಕ 2ನೇ ದಿನ ಊಟದ  ವಿರಾಮಕ್ಕೂ ಮೊದಲು ಸುರಿದ ಮಳೆ ಇಡೀ ದಿನದ ಪಂದ್ಯವನ್ನು ಆಪೋಷಣ ತೆಗೆದುಕೊಂಡಿತ್ತು. ಆಗ ಮೊದಲ ಸೆಷನ್ ನಲ್ಲಿ ಪೂಜಾರ ಬ್ಯಾಟಿಂಗ್ ಮಾಡಿದ್ದರು.  ಬಳಿಕ ಮೂರನೇ ದಿನದಾಟದಲ್ಲಿ ಭಾರತ ಕೇವಲ 172 ರನ್ ಗಳಿಗೆ  ಆಲ್ ಔಟ್ ಆಗಿತ್ತು, ಬಳಿಕ ಬ್ಯಾಟಿಂಗ್ ನಡೆಸಿದ್ದ ಲಂಕಾ ತಂಡ 272 ರನ್ ಗಳಿಗೆನಾಲ್ಕನೇ ದಿನ ಆಲ್ ಔಟ್ ಆಗಿತ್ತು. ಅಂದು ದಿನದಾಟದ ಅಂತ್ಯದಲ್ಲಿ ಅಂತಿಮ ಸೆಷನ್ ನಲ್ಲಿ ಭಾರತದ ಪರ ಬ್ಯಾಟಿಂಗ್ ಮಾಡಿದ್ದ ಪೂಜಾರ 2 ರನ್  ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದು ಕೊಂಡಿದ್ದರು. ಇದು ಮತ್ತೆ ಬ್ಯಾಟಿಂಗ್ ಮಾಡಿದ ಪೂಜಾರ 51 ಎಸೆಚಗಳಲ್ಲಿ 22 ರನ್ ಗಳಿಸಿದ್ದರು.
ಆ ಮೂಲಕ ಟೆಸ್ಟ್ ಪಂದ್ಯವೊಂದರ ಐದೂ ದಿನವೂ ಬ್ಯಾಟಿಂಗ್ ನಡೆಸಿದ ಕೀರ್ತಿಗೆ ಪೂಜಾರಾ ಪಾತ್ರರಾಗಿದ್ದಾರೆ. ಈ ಹಿಂದೆ ಇದೇ ಸಾಧನೆಯನ್ನು ಹಾಲಿ ಟೀಂ ಇಂಡಿಯೋ ಕೋಚ್ ರವಿ ಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಜೈಸಿಂಹ ಮಾಡಿದ್ದರು. 
ಪೂಜಾರ ಸಾಧನೆಗೆ ಬಿಸಿಸಿಐ ಶ್ಲಾಘಿಸಿದ್ದು ಈ ಬಗ್ಗೆ ಪೂಜಾರ ಮತ್ತು ಶಾಸ್ತ್ರಿ ಒಟ್ಟಿಗಿರುವ ಫೋಟೋ ಹಾಕಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.