ಮೊದಲ ಟೆಸ್ಟ್: ಸ್ಟೀವ್ ಸ್ಮಿತ್ ನಂತರ ಡಿಆರ್‌ಎಸ್ ಸುಳಿಯಲ್ಲಿ ಪೆರೇರಾ
ಈ ಹಿಂದೆ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಡ್ರೆಸ್ಸಿಂಗ್ ರೂಂ ನೆರವು ಪಡೆದು ಡಿಆರ್‌ಎಸ್ ಗೆ ಮನವಿ ಮಾಡಿದ್ದು...

Published On :
ಕೋಲ್ಕತ್ತಾ: ಈ ಹಿಂದೆ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಡ್ರೆಸ್ಸಿಂಗ್ ರೂಂ ನೆರವು ಪಡೆದು ಡಿಆರ್‌ಎಸ್ ಗೆ ಮನವಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಶ್ರೀಲಂಕಾ ತಂಡದ ಆಟಗಾರನೊಬ್ಬ ಡಿಆರ್‌ಎಸ್ ಸುಳಿಯಲ್ಲಿ ಸಿಲುಕಿದ್ದಾರೆ.
ಕೋಲ್ಕತ್ತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಲಂಕಾ ಆಟಗಾರ ದಿಲ್ರುವಾನ್ ಪೆರೇರಾ ಡ್ರೆಸ್ಸಿಂಗ್ ರೂಂ ನೆರವು ಪಡೆದು ನಂತರ ಡಿಆರ್ಎಸ್ಗೆ ಮನವಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರು ದಿಲ್ ರುವಾನ್ ಪೆರೇರಾ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬಿಳಿಸಿ ಔಟ್ ಗೆ ಮನವಿ ಮಾಡಿದ್ದರು. ತಕ್ಷಣವೇ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಈ ವೇಳೆ ಕ್ರೀಸ್ ನಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದ ದಿಲ್ ರುವಾನ್ ಕೆಲವು ಕ್ಷಣಗಳ ಬಳಿಕ ಹಿಂತಿರುಗಿ ನೋಡಿ ಡಿಆರ್‌ಎಸ್ಗಾಗಿ ಮನವಿ ಮಾಡಿದರು.
@bhogleharsha @ICC when a batsman take a sigh of signal from dressing room
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತSri Lankaಶ್ರೀಲಂಕಾEden GardensSteve Smithಸ್ಟೀವ್ ಸ್ಮಿತ್Dilruwan PereraDRS Controversyದಿಲ್ರುವಾನ್ ಪೆರೇರಾಡಿಆರ್ಎಸ್ ವಿವಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


