ಕ್ರಿಕೆಟ್

ಸನ್‌ ರೈಸರ್ಸ್ ಹೈದರಾಬಾದ್ ಪ್ಲೇ ಆಫ್‌ ಗೆ ಪ್ರವೇಶ

ಐಪಿಎಲ್ 2017ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವಿನೊಂದಿಗೆ ಪ್ಲೇ ಆಫ್ ಗೆ ಪ್ರವೇಶ ಪಡೆದಿದ್ದು, ಶನಿವಾರ ಗುಜರಾತ್ ಲಯನ್ಸ್ ತಂಡದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸನ್‌ ರೈಸರ್ಸ್ ಹೈದರಾಬಾದ್ ಪ್ಲೇ ಆಫ್‌ ಗೆ ಪ್ರವೇಶ
ಕ್ರಿಕ್ ಇನ್ಫೋ ಚಿತ್ರ
Published On :

ಕಾನ್ಪುರ: ಐಪಿಎಲ್ 2017ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವಿನೊಂದಿಗೆ ಪ್ಲೇ ಆಫ್ ಗೆ ಪ್ರವೇಶ ಪಡೆದಿದ್ದು, ಶನಿವಾರ ಗುಜರಾತ್ ಲಯನ್ಸ್ ತಂಡದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಬ್ಯಾಟಿಂಗ್ ನಲ್ಲಿ ಡೇವಿಡ್ ವಾರ್ನರ್ ಮತ್ತು ವಿ ಶಂಕರ್ ಅಜೇಯ ಆಟ ಹಾಗೂ ಬೌಲಿಂಗ್ ನಲ್ಲಿ ಮಹಮದ್ ಸಿರಾಜ್ ಅವರ ಪ್ರಬಲ ಬೌಲಿಂಗ್ ನಿಂದಾಗಿ ನಿನ್ನೆ ಗುಜರಾತ್ ಲಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 8  ವಿಕೆಟ್ ಗಳ ಭರ್ಜರಿ ಜಯಸಾಧಿಸಿದೆ.

ಟಾಸ್ ಗೆದ್ದು ಫೀಲ್ಜಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡ ಗುಜರಾತ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಗುಜರಾತ್ ತಂಡ ಉತ್ತಮ ಆರಂಭ ಪಡೆಯಿತಾದರೂ ಮೊದಲ ವಿಕೆಟ್  ಪತನವಾಗುತ್ತಿದ್ದಂತೆಯೇ ತಂಡದ ಎಲ್ಲ ಆಟಗಾರರೂ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಜೋಡಿಯನ್ನು ಹೊರತು ಪಡಿಸಿದರೆ ಮತ್ತಾವ ಆಟಗಾರರೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಮಧ್ಯಮ  ಕ್ರಮಾಂಕದ ಜಡೇಜಾ 20 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರಾದರೂ, ಸಿರಾಜ್ ದಾಳಿ ಎದುರು ಅವರು ಮಂಕಾದರು. ಅಂತಿಮವಾಗಿ ಗುಜರಾತ್ ತಂಡ 19.2 ಓವರ್ ಗಳಲ್ಲಿ 154 ರನ್ ಗಳಿ ಸರ್ವ ಪತನಕಂಡಿತು.

155 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಹಾಗೂ ವಿಶಂಕರ್ ಅವರ ಅಜೇಯ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ಗಳ ಅಂತರದಲ್ಲಿ ಪಂದ್ಯ ಜಯಿಸಿತು. ವಾರ್ನರ್ ಅಜೇಯ 69 ರನ್  ಳಿಸಿದರೆ, ಶಂಕರ್ ಅಜೇಯ 63 ರನ್ ಗಳಿಸಿದರು. ಆ ಮೂಲಕ ಹೈದರಾಬಾದ್ ತಂಡ ಪ್ಲೇಆಫ್ ಗೆ 3ನೇ ತಂಡವಾಗಿ ನಡೆಯಿತು

ಬೌಲಿಂಗ್ ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಿದ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.