ಕ್ರಿಕೆಟ್

ಕೋಲ್ಕತಾ ಮಣಿಸಿದ ಮುಂಬೈಗೆ ಅಗ್ರ ಸ್ಥಾನ, ಪ್ಲೇ ಆಫ್ ಗೆ ಕೋಲ್ಕತಾ

ನಿರ್ಣಾಯಕ ಹಂತ ತಲುಪಿರುವ ಐಪಿಎಲ್ ಟೂರ್ನಿಯ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 9 ರನ್ ಗಳಿಂದ ಮಣಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಕೋಲ್ಕತಾ ಮಣಿಸಿದ ಮುಂಬೈಗೆ ಅಗ್ರ ಸ್ಥಾನ, ಪ್ಲೇ ಆಫ್ ಗೆ ಕೋಲ್ಕತಾ
ಕ್ರಿಕ್ ಇನ್ಱೋ ಚಿತ್ರ
Published On :

ಕೋಲ್ಕತಾ: ನಿರ್ಣಾಯಕ ಹಂತ ತಲುಪಿರುವ ಐಪಿಎಲ್ ಟೂರ್ನಿಯ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 9 ರನ್ ಗಳಿಂದ ಮಣಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ನಿನ್ನೆ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತಾ ವಿರುದ್ದ 9 ರನ್ ಗಳ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದು ಕೋಲ್ಕತಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು  ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಆರಂಭಿಕ ಆಟಗಾರ ತಿವಾರ ಅರ್ಧಶತಕ ಗಳಿಸಿದರೆ, ಅಂಬಾಟಿ ರಾಯುಡು 63 ರನ್ ಗಳ ಉತ್ತಮ ಕಾಣಿಗೆ  ನೀಡಿದರು. ಆ ಮೂಲಕ ಮುಂಬೈ ತಂಡ 20 ಓವರ್ ಗಳಲ್ಲಿ 173 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು.

ಈ ಮೊತ್ತವನ್ನು ಬೆನ್ನುಹತ್ತಿದ ಕೋಲ್ಕತಾ ತಂಡ ಆರಂಭಿಕ ಆಘಾತ ಎದುರಿಸಿತು. ತಂಡದ ಸ್ಫೋಟಕ ಬ್ಯಾಟ್ಸಮನ್ ನರೀನ್ ಶೂನ್ಯಕ್ಕೆ ಔಟ್ ಆದರು.ಮನೀಶ್ ಪಾಂಡೆ  33 ರನ್, ಗಳಿಸಿದ್ದೇ ಕೋಲ್ಕತಾ ಪರವಾಗಿ ಬ್ಯಾಟ್ಸಮನ್ ಒಬ್ಬ  ಗಳಿಸಿದ ಗರಿಷ್ಟ ಮೊತ್ತವಾಗಿತ್ತು. ಮುಂಬೈ ತಂಡದ ಸಾಂಘಿಕ ಬೌಲಿಂಗ್ ಗೆ ಮಣಿದ ಕೋಲ್ಕತಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಸೀಮಿತವಾಯಿತು. ಆ ಮೂಲಕ ಮುಂಬೈ ವಿರುದ್ಧ 9  ರನ್ ಗಳ ಅಂತರದಲ್ಲಿ ಪರಾಭವ ಕಂಡಿತು.

ಈ ಪಂದ್ಯದ ಗೆಲುವಿನೊಂದಿಗೆ ಮುಂಬೈ ಅಗ್ರ ಸ್ಥಾನದಲ್ಲಿ ಮುಂದುವರೆದರೆ, ಕೋಲ್ಕತಾ ತಂಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.