ಆರ್ ಸಿಬಿ ಬೆಂಬಿಡದ ಸೋಲು; ತವರಿನ ಅಂತಿಮ ಪಂದ್ಯದಲ್ಲೂ ಕೋಲ್ಕತಾಗೆ ಶರಣಾದ ಕೊಹ್ಲಿ ಪಡೆ
ತವರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಾದರೂ ಗೆಲುವು ಸಾಧಿಸಲು ಪ್ರಯತ್ನಿಸಿದ್ದ ಆರ್ ಸಿಬಿ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ಕೊಹ್ಲಿ ಪಡೆ ಕೋಲ್ಕತಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಬೆಂಗಳೂರು: ತವರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಾದರೂ ಗೆಲುವು ಸಾಧಿಸಲು ಪ್ರಯತ್ನಿಸಿದ್ದ ಆರ್ ಸಿಬಿ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ಕೊಹ್ಲಿ ಪಡೆ ಕೋಲ್ಕತಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 159 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕೋಲ್ಕತಾ ತಂಡಕ್ಕೆ ಆರಂಭಿಕರಾದ ಲಿನ್ ಹಾಗೂ ನರಿನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟಕ್ಕೆ ಈ ಜೋಡಿ 105 ರನ್ ಗಳಿಸುವ ಮೂಲಕ ಕೋಲ್ಕತಾ ಗೆಲುವನ್ನು ಸುಗಮಗೊಳಿಸಿತು. ಈ ಹಂತದಲ್ಲಿ 54 ರನ್ ಗಳಿಸಿದ್ದ ನರಿನ್ ಚೌದರಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರೆ, ಆಗತಾನೆ ಅರ್ಧಶತಕ ಗಳಿಸಿದ್ದ ಲಿನ್ನ್ ನೇಗಿ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಬಂದ ಗ್ರ್ಯಾಂಡ್ ಹೋಮ್ 31 ರನ್ ಗಳಿಸಿ ಔಟ್ ಆದರೆ, ನಾಯಕ ಗಂಭೀರ್ 14 ರನ್ ಗಳಿಸಿ ತಂಡ ಗೆಲುವಿನ ಸನಿಹದಲ್ಲಿದ್ದಾಗ ಔಟ್ ಆದರು. ಅಂತಿಮವಾಗಿ ಪಾಂಡೆ 4 ರನ್ ಗಳಿಸುವ ಮೂಲಕ ಗೆಲುವಿನ ಔಪಚಾರಿಕತೆಯನ್ನೂ ಪೂರ್ಣಗೊಳಿಸಿದರು. ಅಂತಿಮವಾಗಿ ಕೋಲ್ಕತಾ ತಂಡ 4.5 ಓವರ್ ಗಳು ಬಾಕಿ ಇರುವಂತೆಯೇ 159 ರನ್ ಗಳಿಸಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


