ಕ್ರಿಕೆಟ್

ಟ್ರಾವಿಸ್ ಹೆಡ್ ಆಕರ್ಷಕ ಅರ್ಧಶತಕ; ಕೋಲ್ಕತಾಗೆ 159 ರನ್ ಗುರಿ ನೀಡಿದ ಆರ್ ಸಿಬಿ!

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ತಂಡ ಕೋಲ್ಕತಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಟ್ರಾವಿಸ್ ಹೆಡ್ ಆಕರ್ಷಕ ಅರ್ಧಶತಕ; ಕೋಲ್ಕತಾಗೆ 159 ರನ್ ಗುರಿ ನೀಡಿದ ಆರ್ ಸಿಬಿ!
ಕ್ರಿಕ್ ಇನ್ಫೋ ಚಿತ್ರ
Published On :

ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ತಂಡ ಕೋಲ್ಕತಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ತಂಡ ಬೆಂಗಳೂರು ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಪಡೆ ಆರಂಭಿಕ ಆಘಾತ ಎದುರಾಯಿತು. ಮೊದಲ ಎಸೆತದಲ್ಲೇ  ತಂಡದ ಸ್ಫೋಟಕ ಬ್ಯಾಟ್ಸಮನ್ ಶೂನ್ಯಕ್ಕೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟ್ ಆದರು. ಉತ್ತಮ ಆಟದ ಮುನ್ಸೂಚನೆ ನೀಡಿದ ಎಬಿ ಡಿವಿಲಿಯರ್ಸ್ 10 ರನ್ ಗಳಿಸಿದ್ದಾಗ ನರೇನ್ ಬೌಲಿಂಗ್ ನಲ್ಲಿ ಔಟ್  ಆದರು. ಈ ಹಂತದಲ್ಲಿ ತಂಡಕ್ಕೆ ನೆರವಾದ ಮನ್ ದೀಪ್ ಸಿಂಗ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅರ್ಧಶತಕ ಸಿಡಿಸಿದರು.

ಆದರೆ ಮನ್ ದೀಪ್ ಸಿಂಗ್ ಕೂಡ ನರೀನ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಜಾದವ್ 8 ರನ್ ಗಳಿಸಿ ಔಟ್ ಆದರೆ, ನೇಗಿ 5 ರನ್ ಗಳಿಸಿ ಯಾದವ್ ಗೆ ವಿಕೆಟ್ ಒಪ್ಪಿಸದರು. ಒಂದೆಡೆ ತಂಡದ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ನಲ್ಲಿ  ಗಟ್ಟಿಯಾಗಿ ನಿಂತು ಆಡಿದ ಟ್ರಾವಿಸ್ ಹೆಡ್ ಅಜೇಯ ಆಟವಾಡಿದರು. ಅಂತಿಮ ಎಸೆತದವರೆಗೂ ಆಡಿದ ಟ್ರಾವಿಸ್ ಕೇವಲ 47 ಎಸೆತದಲ್ಲಿ 75 ರನ್ ಸಿಡಿಸಿದರು. ಟ್ರಾವಿಸ್ ಅವರ ಬ್ಯಾಟಿಂಗ್ ನೆರವಿನಿಂದಾಗಿ ಆರ್ ಸಿಬಿ ತಂಡ  ನಿಗದಿತ 20 ಓವರ್ ಗಳಲ್ಲಿ 158 ರನ್ ಗಳಿಸಿತು.

ಕೋಲ್ಕತಾ ಪರ ಯಾದವ್ 3 ವಿಕೆಟ್ ಗಳಿಸಿದರೆ, ನಿರೀನ್ 2 ಮತ್ತು ವೋಕ್ಸ್ 1 ವಿಕೆಟ್ ಪಡೆದರು.

ಸತತ ಸೋಲುಗಳಿಂದ ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಬಿದ್ದಿರುವ ಬೆಂಗಳೂರು ತಂಡ ಇಂದಿನ ಪಂದ್ಯ ಗೆದ್ದು ಸತತ ಸೋಲಿನ ಸುಳಿಯಿಂದ ಹೊರಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.