ವಿಕೆಟ್ ಕಿತ್ತು ವಿರಾಟ್ ಕೊಹ್ಲಿಗೆ ಚುಚ್ಚಬೇಕು ಎಂದು ಕೊಂಡಿದ್ದೆ: ಆಸಿಸ್ ಕ್ರಿಕೆಟಿಗ
ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ನಿಂದಿಸಿದ್ದಾಗ ವಿಕೆಟ್ ಕಿತ್ತು ಅವರ ಚುಚ್ಚುಬೇಕು ಎನ್ನುವಷ್ಟರ ಮಟ್ಟಿಗೆ ನನಗೆ ಕೋಪ ಬಂದಿತ್ತು ಎಂದು ಆಸಿಸ್ ಮಾಜಿ ಕ್ರಿಕೆಟಿಗ ಎಡ್ ಕೋವನ್ ಹೇಳಿದ್ದಾರೆ.

ಸಿಡ್ನಿ: ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ನಿಂದಿಸಿದ್ದಾಗ ವಿಕೆಟ್ ಕಿತ್ತು ಅವರ ಚುಚ್ಚುಬೇಕು ಎನ್ನುವಷ್ಟರ ಮಟ್ಟಿಗೆ ನನಗೆ ಕೋಪ ಬಂದಿತ್ತು ಎಂದು ಆಸಿಸ್ ಮಾಜಿ ಕ್ರಿಕೆಟಿಗ ಎಡ್ ಕೋವನ್ ಹೇಳಿದ್ದಾರೆ.
ಕ್ರೀಡಾವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸಮನ್ ಎಡ್ ಕೋವನ್, ಇತ್ತೀಚೆಗಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಸ್ಮಿತ್ ಮತ್ತು ಕೊಹ್ಲಿ ವಿವಾದವನ್ನು ಪ್ರಸ್ತಾಪಿಸಿದರು. ಈ ವೇಳೆ ಇಂತಹ ವಿವಾದಗಳು ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವೆ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಆಗಿದೆ. ಈ ಹಿಂದೆ ಪಂದ್ಯವೊಂದರ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಆಡಿದ್ದ ಮಾತುಗಳು ನನಗೆ ಅತೀವ ಕೋಪ ಬರುವಂತೆ ಮಾಡಿತ್ತು. ಮೈದಾನದಲ್ಲಿದ್ದ ವಿಕೆಟ್ ಕಿತ್ತು ಅವರಿಗೆ ಚುಚ್ಚುಬೇಕು ಎಂದುಕೊಂಡಿದ್ದೆ. ಅಷ್ಟರ ಮಟ್ಟಿಗೆ ನನ್ನ ಕೋಪ ನೆತ್ತಿಗೇರಿತ್ತು ಎಂದು ಎಡ್ ಕೋವನ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯೊಂದರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನನ್ನ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಈ ವೇಳೆ ಕೊಹ್ಲಿ ನನ್ನನ್ನು ವೈಯುಕ್ತಿಕವಾಗಿ ನಿಂದಿಸಿದ್ದರು. ಕೊಹ್ಲಿ ನಿಜಕ್ಕೂ ವೈಯುಕ್ತಿ ಮತ್ತು ಅತ್ಯಂತ ಸೂಕ್ಷ್ಮ ವಿಚಾರವನ್ನು ಕೆದಕಿ ನಿಂದಿಸಿದ್ದರು. ಆಗ ನನ್ನ ಕೋಪ ನಿಜಕ್ಕೂ ನೆತ್ತಿಗೇರಿತ್ತು. ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಅಂಪೈರ್ ಮಧ್ಯ ಪ್ರವೇಶಿಸಿ ಕೊಹ್ಲಿ ತಿಳಿ ಹೇಳಿದ್ದರು. ಆಗ ಕೊಹ್ಲಿ ತನ್ನ ತಪ್ಪಿನ ಅರಿವಾಗಿ ಕೂಡಲೇ ಕ್ಷಮೆ ಕೋರಿದ್ದರು. ಆದರೆ ಆ ಸಂದರ್ಭದಲ್ಲಿ ನಾನು ಅಲ್ಲಿದ್ದ ವಿಕೆಟ್ ಕಿತ್ತು ಕೊಹ್ಲಿ ಚುಚ್ಚುಬೇಕು ಎಂದುಕೊಂಡಿದ್ದೆ ಎಂದು ಎಡ್ ಕೋವನ್ ಹೇಳಿಕೊಂಡಿದ್ದಾರೆ.
ಅಂತೆಯೇ ಭಾರತೀಯ ಕ್ರಿಕೆಟ್ ನ ಅತೀ ದೊಡ್ಡ ಅಭಿಮಾನಿ ತಾವು ಎಂದು ಹೇಳಿಕೊಂಡಿರುವ ಎಡ್ ಕೋವನ್ ಕ್ರಿಕೆಟ್ ಭಾರತದಲ್ಲಿ ಸಿಗುತ್ತಿರುವ ಮನ್ನಣೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಪರ ಒಟ್ಟು 18 ಟೆಸ್ಟ್ ಪಂದ್ಯಗಳನ್ನಾಡಿರುವ ಎಡ್ ಕೋವನ್ 1001 ರನ್ ಗಳಿಸಿದ್ದು, 136 ರನ್ ಅವರ ವೈಯುಕ್ತಿ ಗರಿಷ್ಠ ರನ್ ಗಳಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


