ಇದು ಜಗತ್ತಿನ ಅದ್ಭುತ ಕ್ಯಾಚ್ ಗಳಲ್ಲಿ ಒಂದು!
ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ದೊಡ್ಡದಿದೆ. ಗಾಳಿಯಲ್ಲಿ ಹಾರಿ, ಸಿಕ್ಸರ್ ಬೌಂಡರಿಯಲ್ಲಿ ಒಬ್ಬ ಚೆಂಡನ್ನು ತಡೆದಿಡಿದು ಮತ್ತೊಬ್ಬ ಆಟಗಾರ ಕ್ಯಾಚ್ ಹಿಡಿಯುವುದು...

Published On :
ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ದೊಡ್ಡದಿದೆ. ಗಾಳಿಯಲ್ಲಿ ಹಾರಿ, ಸಿಕ್ಸರ್ ಬೌಡಂರಿಯಲ್ಲಿ ಒಬ್ಬ ಚೆಂಡನ್ನು ತಡೆದಿಡಿದು ಮತ್ತೊಬ್ಬ ಆಟಗಾರ ಕ್ಯಾಚ್ ಹಿಡಿಯುವುದು. ಆದರೆ ಅಂತಹ ಕ್ಯಾಚ್ ಗಳನ್ನು ಮೀರಿಸಬಲ್ಲ ಕ್ಯಾಚ್ ಅನ್ನು ನ್ಯೂಜಿಲೆಂಡ್ ಆಟಗಾರ ಟಾಮ್ ಲಾಥನ್ ಹಿಡಿದಿದ್ದಾರೆ.
ಹಮಿಲ್ಟನ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ನ್ಯೂಜಲೆಂಡ್ ಆಟಗಾರ ಟಾಮ್ ಲಾಥನ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಆಫ್ರಿಕಾದ ಆಟಗಾರ ಡುಪ್ಲೇಸಿಸ್ ಲೆಗ್ ಸೈಡ್ ನಲ್ಲಿ ಸ್ಪಿಪ್ ಮಾಡುತ್ತಾರೆ. ಡುಪ್ಲೇಸಿಸ್ ಸ್ಪಿಪ್ ಮಾಡುವುದನ್ನು ಎರಡು ಸೆಕೆಂಡ್ ಗಳಿಗಿಂತ ಮುಂಚೆ ಗ್ರಹಿಸಿದ ಟಾಮ್ ಲಾಥನ್ ಮೂರು ಹೆಚ್ಚು ಬಲಕ್ಕೆ ಚಲಿಸುತ್ತಾರೆ. ಅದರಂತೆ ಡ್ಲುಪ್ಲೇಸಿಸ್ ಸಿಡಿಸಿದ ಚೆಂಡು ನೇರವಾಗಿ ಟಾಮ್ ಲಾಥನ್ ಕೈಸೇರುತ್ತದೆ. ಇಂತಹದೊಂದು ಕ್ಯಾಚ್ ಅನ್ನು ಇಲ್ಲಿಯವರೆಗೂ ಯಾರು ಹಿಡಿದಿರಲಿಲ್ಲ.
ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಇಂತಹ ಗ್ರಹಿಕೆಯನ್ನು ವಿಕೆಟ್ ಕೀಪರ್ ಗಳು ಮಾಡುತ್ತಾರೆ. ಬ್ಯಾಟ್ಸ್ ಮನ್ ಗಳ ಚಲನವಲನದ ಮೇಲೆ ಕಣ್ಣಿಟ್ಟು ಸ್ಟೆಂಪ್ ಔಟ್ ಅಥವಾ ಕ್ಯಾಚ್ ಗಳನ್ನು ಹಿಡಿಯುತ್ತಾರೆ ಆದರೆ ಕ್ಷೇತ್ರ ರಕ್ಷಣೆ ಮಾಡುವ ಆಟಗಾರ ಇಂತಹ ಸಾಹಸ ಮಾಡಿರುವುದು ನಿಜಕ್ಕೂ ಅದ್ಭುತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್New Zealandದಕ್ಷಿಣ ಆಫ್ರಿಕಾSouth Africaನ್ಯೂಜಿಲೆಂಡ್Faf Du PlessisTom Lathamಟಾಮ್ ಲಾಥನ್ಡುಪ್ಲೇಸಿಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


