ಬೌಲ್ಡ್ ಆದ್ರೂ ಡಿಆರ್‌ಎಸ್‌ಗೆ ಅಪೀಲ್ ಮಾಡಿದ ಬಾಂಗ್ಲಾ ಆಟಗಾರ
ಆಟಗಾರರು ತಮ್ಮ ಅಸ್ವಿತ್ವವನ್ನು ಉಳಿಸಿಕೊಳ್ಳಲು ಏನ್ನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಬಾಂಗ್ಲಾ ಆಟಗಾರ ಬೌಲ್ಡ್ ಆದರೂ ಡಿಆರ್ಎಸ್ ಗೆ ಅಪೀಲ್ ಮಾಡಿದ ಪ್ರಸಂಗ...

ಕೊಲಂಬೋ: ಆಟಗಾರರು ತಮ್ಮ ಅಸ್ವಿತ್ವವನ್ನು ಉಳಿಸಿಕೊಳ್ಳಲು ಏನ್ನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಬಾಂಗ್ಲಾ ಆಟಗಾರ ಬೌಲ್ಡ್ ಆದರೂ ಡಿಆರ್ಎಸ್ ಗೆ ಅಪೀಲ್ ಮಾಡಿದ ಪ್ರಸಂಗ ಸಾಕ್ಷಿಯಾಗಿದೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಆಟಗಾರ ಸೌಮ್ಯ ಸರ್ಕಾರ್ ಬೊಲ್ಡ್ ಆದಾಗ ಮರುಪರಿಶೀಲನೆಗಾಗಿ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದಕ್ಕೆ ಅಂಪೈರ್ ಸೌಮ್ಯ ಸರ್ಕಾರ್ ಗೆ ಬೌಲ್ಡ್ ಆದಾಗ ಡಿಎರ್ಎಸ್ ಗೆ ಮನವಿ ಸಲ್ಲಿಸುವಂತಿಲ್ಲ ಎಂದು ಸೂಚಿಸಿದ ಬಳಿಕ ಆಟಗಾರ ಪೆವಿಲಿಯನ್ ನತ್ತ ಸಾಗಿದರು.
ಸೌಮ್ಯ ಸರ್ಕಾರ ಕೀಪರ್ ಕ್ಯಾಚ್ ಹಿಡಿದು ಕಾಟ್ ಬಿ ಹೈಂಡ್ ಔಟಾಗಿದ್ದೇನೆಂಬ ಗೊಂದಲದಿಂದಾಗಿ ಡಿಆರ್ಎಸ್ ಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಏನೇ ಆದರೂ ಸೌಮ್ಯ ಸರ್ಕಾರ್ ಬೌಲ್ಡ್ ಆದಾಗ ಡಿಆರ್ಎಸ್ ಗೆ ಮನವಿ ಸಲ್ಲಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.
Bangladeshi Batsman Soumya Sarkar Asks for a Review after getting bowled ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


