ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಜಿನಿಯರ್ "ಉಪೇಂದ್ರ"!
ತೀವ್ರ ಕುತೂಹಲ ಕೆರಳಿಸಿರುವ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರ ಇದೀಗ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅರ್ಜಿ ಸಲ್ಲಿಸುವುದರೊಂದಿಗೆ ನಿರ್ಣಾಯಕ ಘಟ್ಟ ತಲುಪಿರುವಂತೆಯೇ, ಇತ್ತ ಹೊಸ ತಿರುವು ಎಂಬಂತೆ ಕೋಚ್ ಹುದ್ದೆಗೆ ಎಂಜಿನಿಯರ್ ಒಬ್ಬ ಅರ್ಜಿ ಸಲ್ಲಿಸಿದ್ದಾನೆ.

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರ ಇದೀಗ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅರ್ಜಿ ಸಲ್ಲಿಸುವುದರೊಂದಿಗೆ ನಿರ್ಣಾಯಕ ಘಟ್ಟ ತಲುಪಿರುವಂತೆಯೇ, ಇತ್ತ ಹೊಸ ತಿರುವು ಎಂಬಂತೆ ಕೋಚ್ ಹುದ್ದೆಗೆ ಎಂಜಿನಿಯರ್ ಒಬ್ಬ ಅರ್ಜಿ ಸಲ್ಲಿಸಿದ್ದಾನೆ.
ಮೂಲಗಳ ಪ್ರಕಾರ ಬಂಗಾಳದ ಎಂಜಿನಿಯರ್ ಉಪೇಂದ್ರ ನಾಥ್ ಬ್ರಹ್ಮಚಾರಿ ಎನ್ನುವವರು ಬಿಸಿಸಿಐಗೆ ಈ-ಮೇಲ್ ಮೂಲಕ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ವಿಚಾರ ಇದೀಗ ಭಾರೀ ಅಚ್ಚರಿಗೆ ಕಾರಣವಾಗಿದೆ. ಎಂಜಿನಿಯರ್ ಉಪೇಂದ್ರನಾಥ್ ಬ್ರಹ್ಮಚಾರಿ ತಮ್ಮ ಅರ್ಜಿಯಲ್ಲಿ "ನಾನೊಬ್ಬ ಎಂಜಿನಿಯರ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕೋಚ್ ಹುದ್ದೆಗಾಗಿ ಬಿಸಿಸಿಐ ಕೇಳಿರುವ ಯಾವ ಅನುಭವವೂ ನನಗಿಲ್ಲ. ಆದರೆ ಈ ಹುದ್ದೆಗೆ ನಾನೇ ಸರಿಯಾದ ವ್ಯಕ್ತಿ ಎಂದುಕೊಳ್ಳುತ್ತೇನೆ. ದಿಗ್ಗಜ ಅನಿಲ್ ಕುಂಬ್ಳೆ ರಾಜೀನಾಮೆ ಬಳಿಕ ಅವರ ಸ್ಥಾನವನ್ನು ನಾನು ತುಂಬಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ಅಹಂಕಾರಿ ವಿರಾಟ್ ಕೊಹ್ಲಿಯನ್ನು ಹೇಗೆ ಬಗ್ಗಿಸಬೇಕು ಎಂದು ನನಗೆ ಚೆನ್ನಾಗಿ ಗೊತ್ತು!
ಇದೇ ವೇಳೆ ಕುಂಬ್ಳೆ ರಾಜಿನಾಮೆಗೆ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದು ಜರಿದಿರುವ ಉಪೇಂದ್ರನಾಥ್ ಬ್ರಹ್ಮಚಾರಿ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ದಿಗ್ಗಜ ಆಟಗಾರರು ಕೋಚ್ ಆಗುವುದು ಇಷ್ಟವಿಲ್ಲ. ಸಲಹಾ ಸಮಿತಿ ಮತ್ತೊಬ್ಬ ದಿಗ್ಗಜನಿಗೆ ಕೋಚ್ ಸ್ಥಾನ ನೀಡಿದರೆ ಕೊಹ್ಲಿ ಅವರನ್ನೂ ಖಂಡಿತಾ ಅವಮಾನಿಸುತ್ತಾರೆ. ನನ್ನನ್ನೇ ಏಕೆ ಕೋಚ್ ಆಗಿ ನೇಮಿಸಬೇಕು ಎಂದು ನೀವು ಕೇಳಬಹುದು?. ನಾನು ಕೊಹ್ಲಿ ಎಷ್ಟೇ ಕೆಟ್ಟದಾಗಿ ವರ್ತಿಸಿದರೂ ಸಹಿಸಿಕೊಳ್ಳುತ್ತೇನೆ.ಇದು ಯಾವುದೇ ದಿಗ್ಗಜರಿಂದ ಸಾಧ್ಯವಿಲ್ಲ. ಕೊಹ್ಲಿ ಓರ್ವ ಸೊಕ್ಕಿನ ಹಾಗೂ ಅಹಂಕಾರಿ ವ್ಯಕ್ತಿ. ನಾನು ಕೊಹ್ಲಿಯನ್ನು ಸರಿಯಾದ ದಾರಿಗೆ ತರುತ್ತೇನೆ. ಆನಂತರ ಬೇಕಿದ್ದರೆ ಬಿಸಿಸಿಐ, ದಿಗ್ಗಜ ಆಟಗಾರರನ್ನು ಕೋಚ್ ಆಗಿ ನೇಮಿಸಬಹುದು' ಎಂದು ಬಿಸಿಸಿಐಗೆ ಕಳುಹಿಸಿರುವ ಈ-ಮೇಲ್‌ನಲ್ಲಿ ಉಪೇಂದ್ರ ನಾಥ್ ಬರೆದಿದ್ದಾರೆ.
ಇದೇ ಜುಲೈ 9ರಂದು ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿಸಲ್ಲಿಸಲು ಕೊನೆಯ ದಿನವಾಗಿದ್ದು, ಈಗಾಗಲೇ ಹಲವು ಖ್ಯಾತ ಮಾಜಿ ಕ್ರಿಕೆಟಿಗರು ಸೇರಿದಂತೆ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಕೂಡ ಅರ್ಜಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


