ಕರ್ನಾಟಕ ತಂಡ ತೊರೆಯುವ ಚಿಂತನೆಯಲ್ಲಿ ರಾಬಿನ್ ಉತ್ತಪ್ಪ; ಸ್ವಾಗತಕ್ಕೆ ಕೇರಳ ಸಿದ್ಧ!
ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಇದೀಗ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡವನ್ನು ಸೇರಿಕೊಳ್ಳಲಿದ್ದಾರೆ...

Published On :
ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಇದೀಗ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್(ಕೆಸಿಎ) ಕಾರ್ಯದರ್ಶಿ ಜಯೇಶ್ ಜಾರ್ಜ್ ಎಂಬುವರು ಐಎಎನ್ಎಸ್ ಜತೆ ಮಾತನಾಡಿ, ರಾಬಿನ್ ಉತ್ತಪ್ಪ ಅವರು ಕರ್ನಾಟಕ ತಂಡವನ್ನು ತೊರೆಯುವ ಚಿಂತನೆ ನಡೆಸಿದ್ದು ಕೆಸಿಎ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದರು ಹೇಳಿದರು.
ಸದ್ಯ ರಾಬಿನ್ ಉತ್ತಪ್ಪ ಅವರು ವಿದೇಶದಲ್ಲಿರುವುದರಿಂದ ಅವರು ಮರಳಿದ ನಂತರ ನಾವು ಅವರ ಉತ್ತರವನ್ನು ಕೇಳಲು ನಿರೀಕ್ಷಿಸಿದ್ದೇವೆ. ಇನ್ನು ಅವರು ಕೇರಳ ಪರವಾಗಿ ಆಡುತ್ತಾರೆ ಎಂಬ ಭರವಸೆ ಇದೆ ಎಂದು ಜಯೇಶ್ ಜಾರ್ಜ್ ಹೇಳಿದ್ದಾರೆ.
ರಾಬಿನ್ ಉತ್ತಪ್ಪ ಅವರಿಗೆ ಕೇರಳಕ್ಕೂ ಸಂಬಂಧವಿದೆ. ಉತ್ತಪ್ಪ ಅವರ ತಾಯಿ ಕೇರಳ ಮೂಲದವರು. ತಂದೆ ಕೊಡಗಿನವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


