ಇತಿಹಾಸ ಏನೇ ಇರಲಿ, ಇಂದಿನ ಉತ್ತಮ ಪ್ರದರ್ಶನವೊಂದೇ ಗೆಲುವು ತಂದುಕೊಡಬಲ್ಲದು: ವಿರಾಟ್ ಕೊಹ್ಲಿ
ಇತಿಹಾಸ ಏನೇ ಇರಲಿ..ಆದರೆ ಪಂದ್ಯ ಗೆಲಲ್ಲು ಉತ್ತಮ ಪ್ರದರ್ಶನವೊಂದರಿಂದ ಮಾತ್ರ ಸಾಧ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್: ಇತಿಹಾಸ ಏನೇ ಇರಲಿ..ಆದರೆ ಪಂದ್ಯ ಗೆಲಲ್ಲು ಉತ್ತಮ ಪ್ರದರ್ಶನವೊಂದರಿಂದ ಮಾತ್ರ ಸಾಧ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ಪಾಕ್ ವಿರುದ್ಧದ ಪಂದ್ಯ ನಮಗೆ ಸಾಮಾನ್ಯ ಪಂದ್ಯಗಳಿದ್ದಂತೆ. ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೇವೆ ಎನ್ನುವುದಕ್ಕಿಂತ ಭಾರತ ತಂಡಕ್ಕಾಗಿ ಆಡುತ್ತಿದೇವೆ ಎಂಬುದೇ ನಮಗೆ ಮುಖ್ಯ. ತಂಡ ಯಾವುದೇ ಇರಲಿ ನಮ್ಮ ಪ್ರಾಮುಖ್ಯತೆ ಮಾತ್ರ ಗೆಲುವು ಮತ್ತು ಉತ್ತಮ ಪ್ರದರ್ಶನದತ್ತ ಮಾತ್ರ. ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಂತೆಯೇ ಈ ಪಂದ್ಯವೂ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ.
ಯಾವುದೇ ತಂಡ ಫೈನಲ್ ಪಂದ್ಯದಲ್ಲಿ ತನ್ನ ಸಂಪೂರ್ಣ ಬಲದೊಂದಿಗೆ ಆಡಲು ಇಚ್ಛಿಸುತ್ತದೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತದೆ. ಹೀಗಾಗಿ ನಮ್ಮ ಪ್ರದರ್ಶನ ಕೂಡ ಉತ್ತಮವಾಗಿರಬೇಕು. ಪಂದ್ಯದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ನಾವು ಮಾತ್ರ ನಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು. ವಿಶ್ವದ ಯಾವುದೇ ತಂಡವೂ ಕೂಡ ಗೆಲುವಿನ ಗ್ಯಾರಂಟಿ ನೀಡುವುದಿಲ್ಲ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಯಾವ ತಂಡ ಗೆಲ್ಲುತ್ತದೆಯೇ ಆ ತಂಡಕ್ಕೆ ಮಾತ್ರ ಗೆಲುವು ಒಲಿಯುತ್ತದೆ. ಪಾಕಿಸ್ತಾನವೇನೂ ದುರ್ಬಲ ತಂಡವಲ್ಲ. ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ. ಮೊದಲ ಪಂದ್ಯ ಸೋತಮಾತ್ರಕ್ಕೆ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಫೈನಲ್ ನಲ್ಲಿ ಸಂಪೂರ್ಣ ಪರಿಶ್ರಮದೊಂದಿಗೆ ಆಡಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


