ಐಸಿಸಿಯ ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ 5 ಪಂದ್ಯಗಳು ಭಾರತ ಆಡಿರುವ ಪಂದ್ಯಗಳೇ!
ಐಸಿಸಿ ಆಯೋಜಿಸಿದ್ದ ಟೂರ್ನಮೆಂಟ್ ಗಳಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯಗಳ ಪಟ್ಟಿಯಲ್ಲಿ ಟಾಪ್ 5 ಪಂದ್ಯಗಳು ಭಾರತ ಆಡಿರುವ ಪಂದ್ಯಗಳೇ ಎಂಬ ಮಾಹಿತಿ ಲಭ್ಯವಾಗಿದೆ.

ಲಂಡನ್: ಭಾರತದಲ್ಲಿ ಕ್ರಿಕೆಟ್ ಒಂದು ಕ್ರೀಡೆಯಲ್ಲ..ಅದೊಂದು ಧರ್ಮ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಆಯೋಜಿಸಿದ್ದ ಟೂರ್ನಮೆಂಟ್ ಗಳಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯಗಳ ಪಟ್ಟಿಯಲ್ಲಿ ಟಾಪ್ 5 ಪಂದ್ಯಗಳು ಭಾರತ ಆಡಿರುವ ಪಂದ್ಯಗಳೇ ಎಂಬ ಮಾಹಿತಿ ಲಭ್ಯವಾಗಿದೆ.
ಐಸಿಸಿ ಈ ವರೆಗೂ ನಡೆಸಿರುವ ಟೂರ್ನಿಗಳಲ್ಲಿ ಅತೀ ಹೆಚ್ಚು ವೀಕ್ಷಕ ವಿವರಣೆ ಕಂಡ ಪಂದ್ಯಗಳೆಲ್ಲವೂ ಭಾರತ ಆಡಿರುವ ಪಂದ್ಯಗಳೇ ಎಂಬ ಮಾಹಿತಿ ಲಭ್ಯವಾಗಿದೆ. ಕ್ರಿಕ್ ಇನ್ಫೋ ವರದಿ ಮಾಡಿರುವಂತೆ ಐಸಿಸಿ ಆತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳಲ್ಲಿ ಟಾಪ್ 5 ಪಂದ್ಯಗಳಲ್ಲಿ ಭಾರತ ಆಡಿದೆ. ಈ ಪೈಕಿ ಮೂರು ಪಂದ್ಯಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವಾಗಿದೆ ಎಂದು ತಿಳಿದುಬಂದಿದೆ.
ಐಸಿಸಿಯ ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ 5 ಪಂದ್ಯಗಳು
2011ರಲ್ಲಿ ನಡೆದ ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಅತೀ ಹೆಚ್ಚು ವೀಕ್ಷಕರನ್ನು ಕಂಡಿದ್ದು, ಈ ಪಂದ್ಯವನ್ನು ಸುಮಾರು 558 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಈ ಪಂದ್ಯ ಐಸಿಸಿಯ ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಅದೇ ಸರಣಿಯ ಸೆಮಿ ಫೈನಲ್ ಪಂದ್ಯ ಅಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ 2ನೇ ಸ್ಥಾನದಲ್ಲಿದ್ದು, ಈ ಪಂದ್ಯವನ್ನು ಸುಮಾರು 495 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯ ಲೀಗ್ ಪಂದ್ಯವಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಮೊದಲ ಲೀಗ್ ಪಂದ್ಯವನ್ನು ಸುಮಾರು 324 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ನಾಲ್ಕನೇ ಸ್ಥಾನದಲ್ಲೂ ಭಾರತದ ಪಂದ್ಯವೇ ಇದ್ದು, 2015ರ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸುಮಾರು 313 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರಂತೆ. ಇನ್ನು ಐದನೇ ಸ್ಥಾನದಲ್ಲಿ 2011ರ ವಿಶ್ವಕಪ್ ಟೂರ್ನಿಯ ಭಾರತ ಮತ್ತು ದಕ್ಷಿಣಾ ಆಪ್ರಿಕಾ ನಡುವಿನ ಪಂದ್ಯವಿದ್ದು, ಇದನ್ನು ಸುಮಾರು 300 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಕ್ರಿಕ್ ಇನ್ಫೋದ ಈ ಮಾಹಿತಿ ಭಾರತದಲ್ಲಿ ಕ್ರಿಕೆಟ್ ಕ್ರೀಡೆಗಿರುವ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸುವಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


