ಭಾರತ-ಪಾಕಿಸ್ತಾನ ಫೈನಲ್: 100 ಕೋಟಿ ಮಂದಿ ಪಂದ್ಯ ವೀಕ್ಷಣೆ ಸಾಧ್ಯವೇ?: ತಜ್ಞರು ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಲೀಗ್ ವೇಳೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತೀ ಹೆಚ್ಚು ವೀಕ್ಷಣೆ ಕಂಡ ಬೆನ್ನಲ್ಲೇ ಇಂದು ನಡೆಯುವ ಫೈನಲ್ ಪಂದ್ಯ ಕೂಡ ದಾಖಲೆ ಪುಟ ಸೇರಬಹುದು. ಆದರೆ ನೂರು ಕೋಟಿ ಮಂದಿ ವೀಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಲಂಡನ್: ಚಾಂಪಿಯನ್ಸ್ ಟ್ರೋಫಿ ಲೀಗ್ ವೇಳೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತೀ ಹೆಚ್ಚು ವೀಕ್ಷಣೆ ಕಂಡ ಬೆನ್ನಲ್ಲೇ ಇಂದು ನಡೆಯುವ ಫೈನಲ್ ಪಂದ್ಯ ಕೂಡ ದಾಖಲೆ ಪುಟ ಸೇರಬಹುದು. ಆದರೆ ನೂರು ಕೋಟಿ ಮಂದಿ ವೀಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಖ್ಯಾತ ಕ್ರೀಡಾ ಪತ್ರಕರ್ತ ನಿಕ್ ಹ್ಯಾಲಿಸ್ ಅವರು ಅಭಿಪ್ರಾಯಪಟ್ಟಿರುವಂತೆ ಇಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಇತಿಹಾಸದ ಪುಟ ಸೇರಬಹುದು. ಆದರೆ ನೂರು ಕೋಟಿ ಮಂದಿ ವೀಕ್ಷಣೆ ಮಾಡುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಬಲ್ ಮಾಫಿಯಾ ಹಾಗೂ ಸುದ್ದಿವಾಹಿನಿಗಳು ಸುಖಾಸುಮ್ಮನೆ ನಿರೀಕ್ಷೆ ಹೆಚ್ಚಿಸುತ್ತಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಉದಾಹರಣೆಯನ್ನೂ ನೀಡಿರುವ ನಿಕ್ ಹ್ಯಾಲಿಸ್ ಅವರು, "ಕ್ರೀಡಾ ಜಗತ್ತಿನಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯವೆಂದರೆ ದಶಕದ ಹಿಂದೆ ನಡೆದ ಫುಟ್ ಬಾಲ್ ಪಂದ್ಯ. ಆರ್ಸೆನಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳ ನಡುವಿನ ಪಂದ್ಯವನ್ನು ಸುಮಾರು100 ಕೋಟಿ ಮಂದಿ ವೀಕ್ಷಿಸಿದ್ದರು ಎಂದು ಸುದ್ದಿ ಮಾಡಲಾಗಿತ್ತು. ಆದರೆ ಸತ್ಯಾಂಶ ಬೇರೆಯಾಗಿದ್ದು, ಆ ಪಂದ್ಯವನ್ನು 27 ಮಿಲಿಯನ್ ಮಂದಿ ಮಾತ್ರ ವೀಕ್ಷಣೆ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪಂದ್ಯವೊಂದಕ್ಕೆ ನೂರು ಕೋಟಿ ವೀಕ್ಷಣೆ ಅಷ್ಟು ಸುಲಭವಲ್ಲ. ಕೇಬಲ್, ವೆಬ್ ಸೈಟ್ ಹೀಗೆ ನಾನಾ ಮೂಲಗಳಿಂದ ಪಂದ್ಯ ವೀಕ್ಷಣೆ ಮಾಡಿದರೂ ಅಷ್ಟು ದೊಡ್ಡ ಪ್ರಮಾಣದ ವೀಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 2008ರ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಮಾತ್ರ 1 ಕೋಟಿ ವೀಕ್ಷಕರನ್ನು ಕಂಡಿತ್ತು. ಆದನ್ನು ಹೊರತು ಪಡಿಸಿದರೆ, 2010ರ ಫೀಪಾ ವಿಶ್ವಕಪ್ ಫೈನಲ್ ಪಂದ್ಯವನ್ನು 530.9 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಬಳಿಕ 2012ರ ಯೂರೋ ಕಪ್ ಫೈನಲ್ ಪಂದ್ಯವನ್ನು 299 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದು, ಬಳಿಕ 2015ರ ಚಾಂಪಿಯನ್ಸ್ ಲೀಗ್ ಫುಟ್ ಬಾಲ್ ಫೈನಲ್ ಪಂದ್ಯವನ್ನು 180 ಮಿಲಿಯನ್ ಮತ್ತು 2015ರಲ್ಲಿ ಸೂಪರ್ ಬೌಲ್ ರಗ್ಬಿ ಪಂದ್ಯವನ್ನು 160 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು ಎಂದು ನಿಕ್ ಹ್ಯಾಲಿಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


