ಕ್ರಿಕೆಟ್

ಈ ಮೂರು ಕಾರಣಗಳಿಂದಾಗಿ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಗೆಲ್ಲಲೇ ಬೇಕು!

ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತದ ಮಟ್ಟಿಗೆ ಪ್ರಮುಖವಾಗಿದ್ದು, 3 ಕಾರಣಗಳಿಗಾಗಿ ಫೈನಲ್ ಪಂದ್ಯವನ್ನು ಭಾರತ ಗೆಲ್ಲಲೇ ಬೇಕಿದೆ.

ಈ ಮೂರು ಕಾರಣಗಳಿಂದಾಗಿ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಗೆಲ್ಲಲೇ ಬೇಕು!
ಸಂಗ್ರಹ ಚಿತ್ರ
Published On :

ಲಂಡನ್: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತದ ಮಟ್ಟಿಗೆ ಪ್ರಮುಖವಾಗಿದ್ದು, 3 ಕಾರಣಗಳಿಗಾಗಿ  ಫೈನಲ್ ಪಂದ್ಯವನ್ನು ಭಾರತ ಗೆಲ್ಲಲೇ ಬೇಕಿದೆ.

ಹೌದು..ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ಭಾರತವನ್ನು ಸೋಲಿಸಿಲ್ಲ ಎಂಬ ಕಾರಣಕ್ಕಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ಪಾಕಿಸ್ತಾನ ಗೆಲ್ಲಬೇಕು ಎಂದು ಭಾವಿಸಿದ್ದರೆ, ಭಾರತ ತಂಡ ಪ್ರಮುಖ ಮೂರು  ಕಾರಣಗಳಿಗಾಗಿ ಈ ಭಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ಗೆಲ್ಲಲೇಬೇಕಿದೆ. ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇ ಬೇಕು ಎನ್ನಲು ಇರುವ ಪ್ರಮುಖ ಮೂರು ಕಾರಣಗಳು ಇಂತಿವೆ.

ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು
ಭಾರತ ತಂಡ ಹಾಲಿ ಚಾಂಪಿಯನ್ ಟ್ರೋಫಿಯ ವಿಜೇತ ತಂಡವಾಗಿದ್ದು, 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಹೀಗಾಗಿ ಈ ಬಾರಿಯೂ  ಭಾರತ ಪ್ರಶಸ್ತಿ ಸುತ್ತಿಗೇರಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.

ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ಮುಂದುವರೆಸಲು
ಇನ್ನು ಐಸಿಸಿ ಆಯೋಜಿಸುವ ಯಾವುದೇ ಟೂರ್ನಮೆಂಟ್ ಗಳಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಈ ವರೆಗೂ 2 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ಅಂತೆಯೇ ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಅಜೇಯ ದಾಖಲೆ ಮುಂದುವರೆದಿದೆ. ಹೀಗಾಗಿ ಭಾರತ ತನ್ನ ಈ ದಾಖಲೆಯನ್ನು ಮುಂದವೆರಸಲು ಹೋರಾಡಬೇಕಿದ್ದು, ಲೀಗ್ ಪಂದ್ಯದಂತೆಯೇ ಫೈನಲ್ ನಲ್ಲೂ ಪಾಕಿಸ್ತಾನವನ್ನು ಬಗ್ಗು ಬಡಿಯಬೇಕಿದೆ. ಈ ಹಿಂದೆ 2007ರಲ್ಲಿ ಟಿ20 ವಿಶ್ವಕಪ್‌ ಫೈನಲ್‌ ನಲ್ಲಿ ಉಭಯ ತಂಡಗಳು ಭೇಟಿಯಾಗಿತ್ತಾದರೂ, ಆ ಟೂರ್ನಿಯಲ್ಲೂ ಪಾಕಿಸ್ತಾನ ತಂಡವನ್ನು ಭಾರತ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. 32  ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳ ಏಕದಿನ ಮಾದರಿಯ ಟೂರ್ನಮೆಂಟ್ ನಲ್ಲಿ ಪರಸ್ಪರ ಫೈನಲ್ ನಲ್ಲಿ ಎದುರಾಗುತ್ತಿದ್ದು, 1985ರಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ  ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

ನಂಬರ್ 1 ಸ್ಥಾನಕ್ಕೇರಲು
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತಕ್ಕೆ ಎಷ್ಟು ಪ್ರಮುಖವೆಂದರೆ, ಫೈನಲ್ ಪಂದ್ಯವನ್ನು ಭಾರತ ಜಯಿಸಿದ್ದೇ ಆದರೆ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತದೆ. ಪ್ರಸ್ತುತ 119 ಅಂಕಗಳನ್ನು  ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದು, 117 ಅಂಕಗಳನ್ನು ಹೊಂದಿರುವ ಭಾರತ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯ ಗೆದ್ದರೆ ಆಗ ಭಾರತದ ಅಂಕ 119ಕ್ಕೇರಿಕೆಯಾಗಲಿದೆ. ಆ ಮೂಲಕ ಭಾರತ  ಆಗ್ರ ಸ್ಥಾನಕ್ಕೇರಲಿದ್ದು, ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಕುಸಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.