ಕ್ರಿಕೆಟ್

ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತರಾದ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
Published On :
ಲಂಡನ್: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತರಾದ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಲಂಡನ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದು, ತಮ್ಮ 175ನೇ ಇನ್ನಿಂಗ್ಸ್ ನಲ್ಲಿ 8 ಸಾವಿರ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಆ  ಮೂಲಕ ಕೊಹ್ಲಿ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಇಂದಿನ ಪಂದ್ಯವೂ ಸೇರಿದಂತೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 183 ಪಂದ್ಯಗಳಲ್ಲಿ 175 ಇನ್ನಿಂಗ್ಸ್ ಗಳನ್ನು ಆಡಿ ಒಟ್ಟು 8, 908 ರನ್ ಗಳನ್ನು ಗಳಿಸಿದ್ದಾರೆ. ವಿಶ್ವ ಕ್ರಿಕೆಟ್ ನಲ್ಲಿ ಏಕದಿನ ಮಾದರಿಯಲ್ಲಿ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ  ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್ ಅಗ್ರ ಸ್ಥಾನದಲ್ಲಿದ್ದರು. ಡಿವಿಲಿಯರ್ಸ್ ಒಟ್ಟು 190 ಪಂದ್ಯಗಳಲ್ಲಿ 182 ಇನ್ನಿಂಗ್ಸ್ ಗಳನ್ನು ಆಡಿ 8 ಸಾವಿರ ರನ್ ಗಳನ್ನು ಪೂರೈಸಿದ್ದರು. ಆದರೆ ಇದೀಗ ಡಿವಿಲಿಯರ್ಸ್ ರನ್ನು ಹಿಂದಿಕ್ಕಿರುವ ಕೊಹ್ಲಿ ಕೇವಲ 175 ಇನ್ನಿಂಗ್ಸ್ ಗಳಲ್ಲಿ 8  ಸಾವಿರ ರನ್ ಪೂರೈಸಿದ್ದಾರೆ.ನಿರ್ಮಿಸಲಿದ್ದಾರೆ. 
ಸಚಿನ್, ಗಂಗೂಲಿ, ಲಾರಾ ದಾಖಲೆ ಧೂಳಿಪಟ
ಇದೇ ವೇಳೆ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿದ್ದಾರೆ. ಸಚಿನ್ 8 ಸಾವಿರ ರನ್ ಪೂರೈಸಲು 210 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರೆ, ಗಂಗೂಲಿ 200 ಇನ್ನಿಂಗ್ಸ್ ಗಳಲ್ಲಿ 8  ಸಾವಿರ ರನ್ ಪೂರೈಸಿದ್ದರು. ಅಂತೆಯೇ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೆಜೆಂಡ್ಸ ಬ್ರಿಯಾನ್ ಲಾರಾ 211 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದರು.
ದಾಖಲೆ ಹಿಂಬಾಲಿಸುತ್ತಿರುವ ಹಶೀಂ ಆಮ್ಲಾ
ಇನ್ನು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಕೂಡ ರೇಸ್ ನಲ್ಲಿದ್ದು, ಈಗಾಗಲೇ 2 ಸಾವಿರ, 3 ಸಾವಿರ, 4 ಸಾವಿರ, 5 ಸಾವಿರ ಮತ್ತು 6 ಸಾವಿರ ರನ್ ಗಳನ್ನು ವೇಗವಾಗಿ ಪೂರೈಸಿದ ದಾಖಲೆ ಹೊಂದಿರುವ ಆಮ್ಲಾ, ಇದೀಗ 8 ಸಾವಿರ ಗಡಿಯಲ್ಲಿದ್ದಾರೆ. ಪ್ರಸ್ತುತ ಆಮ್ಲಾ 153  ಏಕದಿನ ಇನ್ನಿಂಗ್ಸ್ ನಲ್ಲಿ 7186 ರನ್ ಗಳಿಸಿದ್ದು, 8 ಸಾವಿರ ರನ್ ಗಳಿಕೆಗೆ ಕೇವಲ 814 ರನ್ ಗಳ ಬಾಕಿ ಇದೆ. ಈ ಹಿಂದೆ ಇದೇ ಆಮ್ಲಾ ಕೊಹ್ಲಿ ಅವರ ವೇಗದ 7 ಸಾವಿರ ರನ್ ಗಳಿಕೆ ದಾಖಲೆಯನ್ನು ಮುರಿದಿದ್ದರು. ಆಮ್ಲಾ 166 ಇನ್ನಿಂಗ್ಸ್ ಗಳಲ್ಲಿ 7 ಸಾವಿರ ರನ್ ಪೂರೈಸಿದ್ದರೆ, ಆಮ್ಲಾ ಇದನ್ನು  ಕೇವಲ 150 ಇನ್ನಿಂಗ್ಸ್ ಗಳಲ್ಲಿ ಪೂರೈಸಿ ದಾಖಲೆ ಬರೆದಿದ್ದರು. 
2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರಾದರೂ, ಬಳಿಕ ತಮ್ಮ ಅದ್ಬುತ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸುಧೀರ್ಘವಾಗಿ ಸ್ಥಾನ ಕಾಯ್ದುಕೊಂಡಿದ್ದರು.  ಇದೀಗ ಅದೇ ಅದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ಟೀಂ  ಇಂಡಿಯಾ ನಾಯಕ ಸ್ಥಾನಕ್ಕೇರಿದ್ದು, ಏಕದಿನದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಬರೊಬ್ಬರಿ 92.37ರಷ್ಟಿದೆ. ಕಳೆದ ವರ್ಷ ಕೊಹ್ಲಿ 85.50 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.