ಆಸಿಸ್ ಅಧಿಪತ್ಯ ಅಂತ್ಯ; 2011ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಸಾರ್ವಭೌಮತ್ವ!
ಐಸಿಸಿ ಟೂರ್ನಮೆಂಟ್ ಗಳಲ್ಲಿ ನೆಚ್ಚಿನ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾ ಇದೀಗ ತನ್ನ ಖ್ಯಾತಿ ಕಳೆದುಕೊಂಡಿದ್ದು, ಆ ಸ್ಥಾನಕ್ಕೆ ಇದೀಗ ಭಾರತ ತಂಡವೇ ಅಧಿಪತಿಯಾಗಿದೆ.

ಲಂಡನ್: ಐಸಿಸಿ ಟೂರ್ನಮೆಂಟ್ ಗಳಲ್ಲಿ ನೆಚ್ಚಿನ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾ ಇದೀಗ ತನ್ನ ಖ್ಯಾತಿ ಕಳೆದುಕೊಂಡಿದ್ದು, ಆ ಸ್ಥಾನಕ್ಕೆ ಇದೀಗ ಭಾರತ ತಂಡವೇ ಅಧಿಪತಿಯಾಗಿದೆ.
ಟಿ20 ವಿಶ್ವಕಪ್ ನಿಂದ ಆರಂಭವಾದ ಭಾರತ ತಂಡದ ಜೈತ್ರ ಯಾತ್ರೆ ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಮುಂದುವರೆದಿದ್ದು, ಕಳೆದ ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡ ಇದೀಗ ಮತ್ತೆ ಪ್ರಶಸ್ತಿಗೆ ಪಾಕಿಸ್ತಾನದೊಂದಿಗೆ ಕಾದಾಡಲು ಸಜ್ಜಾಗಿದೆ. ಈ ಬಾರಿಯೂ ಪ್ರಶಸ್ತಿ ಗೆಲುವ ನೆಚ್ಚಿನ ತಂಡ ಭಾರತವೇ ಎಂದು ಹೇಳಲಾಗುತ್ತಿದೆ.
ಇನ್ನು 2011ರ ಬಳಿಕ ನಡೆದ ಐಸಿಸಿ ಟೂರ್ನಮೆಂಟ್ ಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. 2011ರ ಬಳಿಕ ನಡೆದ ಒಟ್ಟು 7 ಟೂರ್ನಮೆಂಟ್ ಗಳಲ್ಲಿ ಭಾರತ ಈ ವರೆಗೂ 4 ಬಾರಿ ಫೈನಲ್ ಪ್ರವೇಶ ಮಾಡಿದ್ದು, 2 ಸೆಮಿಫೈನಲ್ ಗೇರಿತ್ತು. ಆ ಮೂಲಕ ಭಾರತ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಶ್ರೀಲಂಕಾ ಒಟ್ಟು 3 ಬಾರಿ ಫೈನಲ್ ಪ್ರವೇಶ ಮಾಡಿ, 1 ಬಾರಿ ಸೆಮೀಸ್ ಹಂತಕ್ಕೇರಿತ್ತು. ಇನ್ನು 2 ಬಾರಿ ಫೈನಲ್ ಹಾಗೂ 1 ಸೆಮೀಸ್ ಗೆ ಬಂದಿದ್ದ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದ್ದು, 2 ಬಾರಿ ಫೈನಲ್ ಹಾಗೂ 1 ಸೆಮೀ ಫೈನಲ್ ಗೇರಿದ್ದ ವೆಸ್ಟ್ ಇಂಡೀಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


