"ಲೆಗ್ ಬಿಫೋರ್ ವಿಕೆಟ್" ಎಂದರೇನು?.."ಕ್ರಿಕೆಟ್ ನಲ್ಲಿ ಇಲ್ಲದ ಪ್ರಶ್ನೆ ಕೇಳಬೇಡಿ" ಎಂದ ಅಫ್ರಿದಿ!
"ಲೆಗ್ ಬಿಫೋರ್ ವಿಕೆಟ್" ಎಂದರೇನು? ಎಂಬ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ನೀಡಿದ ಉತ್ತರ ನಿಜಕ್ಕೂ ಅವರ ಕ್ರಿಕೆಟ್ ಪಾಂಡಿತ್ಯವನ್ನು ಪ್ರಶ್ನಿಸುವಂತಿದೆ.

ಇಸ್ಲಾಮಾಬಾದ್: "ಲೆಗ್ ಬಿಫೋರ್ ವಿಕೆಟ್" ಎಂದರೇನು? ಎಂಬ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ನೀಡಿದ ಉತ್ತರ ನಿಜಕ್ಕೂ ಅವರ ಕ್ರಿಕೆಟ್ ಪಾಂಡಿತ್ಯವನ್ನು ಪ್ರಶ್ನಿಸುವಂತಿದೆ.
ಶಾಹಿದ್ ಅಫ್ರಿದಿ..ಪಾಕಿಸ್ತಾನ ತಂಡದ ಮಾಜಿನಾಯಕ ಹಾಗೂ ಒಂದು ಕಾಲದ ಪಾಕ್ ಕ್ರಿಕೆಟ್ ತಂಡ ಸ್ಫೋಟಕ ಬ್ಯಾಟ್ಸಮನ್.. ಅಫ್ರಿದಿ ತಮ್ಮ 16ನೇ ವಯಸ್ಸಿನಲ್ಲಿ ಅಂದರೆ 1996 ಅಂತಾರಾಷ್ಟೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಸರಿಸುಮಾರು 2 ದಶಕಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಅವರು ಪ್ರತಿನಿಧಿಸಿದ್ದರು. ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕರಾಗಿ ಕೂಡ ಸೇವೆ ಸಲ್ಲಿಸಿದ್ದ ಅಫ್ರಿದಿ ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಇಂತಹ ಸುದೀರ್ಘ ಕ್ರಿಕೆಟ್ ಅನುಭವ ಹೊಂದಿರುವ ಅಫ್ರಿದಿಗೆ ಲೆಗ್ ಬಿಫೋರ್ ವಿಕೆಟ್ ಅಥವಾ ಎಲ್ ಬಿ ಡಬಲ್ಯೂ ಎಂದರೆ ಗೊತ್ತಿಲ್ಲವಂತೆ... ಅಚ್ಚರಿಯಾದರೂ ಇದು ನಿಜ.. ಪಾಕಿಸ್ತಾನದ ಖಾಸಗಿ ಟಿವಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅಫ್ರಿದಿಗೆ ನಿರೂಪಕರೊಬ್ಬರು ವಾಟ್ ಇಸ್ "ಲೆಗ್ ಬಿಫೋರ್ ವಿಕೆಟ್" ಎಂದು ಪ್ರಶ್ನಿಸಿದ್ದರು. ಅಫ್ರಿದಿ ಕಿವಿಗೆ ಹೆಡ್ ಫೋನ್ ಹಾಕಿ ನಿರೂಪಕ ಈ ಪ್ರಶ್ನೆ ಕೇಳಿದ್ದ. ಈ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಅಫ್ರಿದಿ ಕ್ರಿಕೆಟ್ ನಲ್ಲಿ ಇಲ್ಲದ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದರೆ ನನಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ದಂಗು ಬಡಿಸಿದ್ದು, ಅಫ್ರಿದಿ ನೀಡಿದ ಉತ್ತರ ಮತ್ತು ಅವರ ಕ್ರಿಕೆಟ್ ಪಾಂಡಿತ್ಯ ಎಲ್ಲರ ದಿಗ್ಭ್ರಮೆಗೆ ಕಾರಣವಾಗಿದೆ.
ಅಫ್ರಿದಿ ಅವರ ಈ ಸಂದರ್ಶನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Afridi don't know what does "Leg Before Wicket" means
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


