ಕ್ರಿಕೆಟ್

ಮತ್ತೊಂದು ವಿಶ್ವ ದಾಖಲೆಯತ್ತ ವಿರಾಟ್ ಕೊಹ್ಲಿ!

ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪಾರುಪತ್ಯ ಮುಂದುವರೆದಿದ್ದು, ಕೊಹ್ಲಿ ಇನ್ನು ಕೇವಲ 88 ರನ್ ಗಳನ್ನು ಪೇರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗುತ್ತಾರೆ.

ಮತ್ತೊಂದು ವಿಶ್ವ ದಾಖಲೆಯತ್ತ ವಿರಾಟ್ ಕೊಹ್ಲಿ!
ಸಂಗ್ರಹ ಚಿತ್ರ
Published On :

ಲಂಡನ್: ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪಾರುಪತ್ಯ ಮುಂದುವರೆದಿದ್ದು, ಕೊಹ್ಲಿ ಇನ್ನು ಕೇವಲ 88 ರನ್ ಗಳನ್ನು ಪೇರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಪೂರೈಸಿದ  ವಿಶ್ವದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗುತ್ತಾರೆ.

ಪ್ರಸ್ತುತ ಕ್ರಿಕೆಟ್ ವೃತ್ತಿ ಜೀವನದ ಉತ್ತುಂಗ ಘಟದಲ್ಲಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 182 ಪಂದ್ಯಗಳಲ್ಲಿ 174 ಇನ್ನಿಂಗ್ಸ್ ಗಳನ್ನು ಆಡಿ ಒಟ್ಟು 7,912 ರನ್ ಗಳನ್ನು ಗಳಿಸಿದ್ದಾರೆ. ಹೀಗಾಗಿ ಕೊಹ್ಲಿಗೆ 8 ಸಾವಿರ ರನ್  ಪೂರೈಸಲು ಇನ್ನು ಕೇವಲ 88 ರನ್ ಗಳ ಅವಶ್ಯಕತೆ ಇದೆ. ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಏಕದಿನ ಮಾದರಿಯವ್ವಿ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್ ಇದ್ದು,  ಡಿವಿಲಿಯರ್ಸ್ ಒಟ್ಟು 190 ಪಂದ್ಯಗಳಲ್ಲಿ 182 ಇನ್ನಿಂಗ್ಸ್ ಗಳನ್ನು ಆಡಿ 8 ಸಾವಿರ ರನ್ ಗಳನ್ನು ಪೂರೈಸಿದ್ದರು.

ಇದೀಗ ಕೊಹ್ಲಿ ಕೂಡ ಅವರನ್ನೇ ಹಿಂಬಾಲಿಸಿದ್ದು, ಇನ್ನು ಕೇವಲ 7 ಇನ್ನಿಂಗ್ಸ್ ಗಳಲ್ಲಿ 88 ರನ್ ಪೇರಿಸಿದರೆ ಡಿವಿಲಿಯರ್ಸ್ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಲಿದ್ದಾರೆ.

2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರಾದರೂ, ಬಳಿಕ ತಮ್ಮ ಅದ್ಬುತ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸುಧೀರ್ಘವಾಗಿ ಸ್ಥಾನ ಕಾಯ್ದುಕೊಂಡಿದ್ದರು.  ಇದೀಗ ಅದೇ ಅದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ಟೀಂ ಇಂಡಿಯಾ ನಾಯಕ ಸ್ಥಾನಕ್ಕೇರಿದ್ದು, ಏಕದಿನದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಬರೊಬ್ಬರಿ 92.37ರಷ್ಟಿದೆ. ಕಳೆದ ವರ್ಷ ಕೊಹ್ಲಿ 85.50 ಬ್ಯಾಟಿಂಗ್ ಸರಾಸರಿ  ಹೊಂದಿದ್ದರು.

ಪ್ರಸ್ತುತ ಲಂಡನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಕೂಡ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಟೂರ್ನಿಯಲ್ಲಿ ಕೊಹ್ಲಿ ಒಟ್ಟು 157 ರನ್ ಗಳನ್ನು ಪೇರಿಸಿದ್ದಾರೆ. ಇದರಲ್ಲಿ 2  ಅರ್ಧಶತಕಗಳು ಕೂಡ ಸೇರಿವೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 7ನೇ ಆಟಗಾರನಾಗಿದ್ದು, 271 ರನ್ ಗಳಿಸಿರುವ ಶಿಖರ್ ಧವನ್ ಅಗ್ರ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.