ಇದು ಈವರೆಗಿನ ನಮ್ಮ ಅತ್ಯುತ್ತಮ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿಗೆ ವಿರಾಟ್ ಕೊಹ್ಲಿ ಮೆಚ್ಚುಗೆ
2017ರ ಸರಣಿಯಲ್ಲಿ ಭಾರತ ತಂಡವಾಡಿದ ಪಂದ್ಯಗಳಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಅತ್ಯುತ್ತಮ ಪಂದ್ಯವಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಸರಣಿಯಲ್ಲಿ ಭಾರತ ತಂಡವಾಡಿದ ಪಂದ್ಯಗಳಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಅತ್ಯುತ್ತಮ ಪಂದ್ಯವಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಬರೊಬ್ಬರಿ 8 ವಿಕೆಟ್ ಗಳಿಂದ ಮಣಿಸಿ ಸೆಮಿ ಫೈನಲ್ ಗೆ ಭಾರತ ಏರಿದ್ದು, ಇದು ಈ ವರೆಗಿನ ಪಂದ್ಯಗಳಲ್ಲೇ ಅತ್ಯುತ್ತಮ ಪಂದ್ಯ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಎಲ್ಲ ವಿಭಾಗಗಳಲ್ಲೂ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಬೌಲಿಂಗ್, ಫೀಲ್ಡಿಂಗ್ ಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತು ಎಂದು ಹೇಳಿದ್ದಾರೆ.
ಪಂದ್ಯದಸ್ಸಿ ಟಾಸ್ ಕೂಡ ನಿರ್ಣಾಯಕ ಪಾತ್ರಹೊಂದಿತ್ತು. ಪಿಚ್ ಕೂಡ ನಾವಂದು ಕೊಂಡಷ್ಟು ದೊಡ್ಡ ಪ್ರಮಾಣದ ತಿರುವು ಕಾಣಲಿಲ್ಲ. ಉತ್ತಮ ಕ್ರಿಕೆಟ್ ಪಿಚ್ ಆಗಿತ್ತು. ನಮ್ಮ ಬೌಲರ್ ಗಳ ಪರಿಶ್ರಮಕ್ಕೆ ಫೀಲ್ಡರ್ ಗಳು ಉತ್ತಮ ಸಾಥ್ ನೀಡಿದರು. ಹೀಗಾಗಿಯೇ ತಂಡ ನಿರೀಕ್ಷಿತ ಫಲಿತಾಂಶ ಪಡೆಯುವಂತಾಯಿತು ಎಂದು ಕೊಹ್ಲಿ ಹೇಳಿದರು.
ಎಬಿಡಿ ರನ್ ಔಟ್ ಪಂದ್ಯದ ಪ್ರಮುಖ ತಿರುವು
ಇದೇ ವೇಳೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ ರನೌಟ್ ಆಗಿದ್ದು, ಪಂದ್ಯದ ತಿರುವು ಎಂದು ಬಣ್ಣಿಸಿದ ಕೊಹ್ಲಿ, ಆದಷ್ಟು ಬೇಗ ಎಬಿಡಿಯನ್ನು ಕಟ್ಟಿಹಾಕದಿದ್ದರೆ ಖಂಡಿತಾ ಅವರು ನಿಮ್ಮ ಯೋಜನೆಗಳನ್ನು ಛಿದ್ರ ಮಾಡುತ್ತಾರೆ. ಯಾವುದೇ ಪ್ರಮುಖ ಬ್ಯಾಟ್ಸಮನ್ ಕೂಡ ಕೊನೆ ಓವರ್ ಓವರ್ ವರೆಗೆ ಕ್ರೀಸ್ ಕಾಯ್ದುಕೊಳ್ಳದಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆ ಯೋಜನೆ ಸಫಲ ಕೂಡ ಆಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಬಾಂಗ್ಲಾ ವಿರುದ್ಧವೂ ಗೆಲ್ಲುವ ವಿಶ್ವಾಸ
ಇದೇ ವೇಳೆ ಬರ್ಮಿಂಗ್ ಹ್ಯಾನ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶದ ವಿರುದ್ಧದ ಸೆಮಿ ಫೈನಲ್ ಪಂದ್ಯದ ಕುರಿತು ಮಾತನಾಡಿದ ಕೊಹ್ಲಿ, ಬರ್ಮಿಂಗ್ ಹ್ಯಾಮ್ ಪಿಚ್ ನ ಪರಿಚಯ ನಮಗಿದೆ. ಅದೊಂದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದು, ಖಂಡಿತಾ ಸೆಮಿಫೈನಲ್ ನಲ್ಲಿ ಬಾಂಗ್ಸಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


