ಶಕೀಬ್ ಅಲ್ ಹಸನ್-ಮಹಮದುಲ್ಲಾ ದಾಖಲೆ ಜೊತೆಯಾಟ!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಕೀಬ್ ಅಲ್ ಹಸನ್ ಮತ್ತು ಮಹಮದುಲ್ಲಾ ಜೋಡಿಯ ಜೊತೆಯಾಟ ಹೊಸದೊಂದು ದಾಖಲೆ ಬರೆದಿದೆ.

ಕಾರ್ಡಿಫ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಕೀಬ್ ಅಲ್ ಹಸನ್ ಮತ್ತು ಮಹಮದುಲ್ಲಾ ಜೋಡಿಯ ಜೊತೆಯಾಟ ಹೊಸದೊಂದು ದಾಖಲೆ ಬರೆದಿದೆ.
ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲೇ ಈ ಜೋಡಿ ಗಳಿಸಿದ 224 ರನ್ ಜೊತೆಯಾಟ ಬಾಂಗ್ಲಾದೇಶ ಕ್ರಿಕೆಟ್ ನ ಅತೀ ದೊಡ್ಡ ಏಕದಿನ ಜೊತೆಯಾಟವಾಗಿ ದಾಖಲಾಗಿದೆ. 5ನೇ ವಿಕೆಟ್ ಗೆ ಜೊತೆಯಾದ ಶಕೀಬ್ ಹಾಗೂ ಮಹಮದುಲ್ಲಾ ಜೋಡಿ ಕೇವಲ 209 ಎಸೆತಗಳನ್ನು ಎದುರಿಸಿ ಬರೊಬ್ಬರಿ 224 ರನ್ ಸಿಡಿಸಿತ್ತು. ಈ ಪೈಕಿ ಶಕೀಬ್ 111 ರನ್ ಗಳಿಸಿದ್ದರೆ, ಮಹಮದುಲ್ಲಾ 98 ರನ್ ಗಳಿಸಿದ್ದರು.
ಇದಕ್ಕೂ ಮೊದಲು 2015ರಲ್ಲಿ ಢಾಕಾದಲ್ಲಿ ಮುಷ್ಫಿಕರ್ ರೆಹಮಾನ್ ಮತ್ತು ತಮೀಮ್ ಇಕ್ಬಾಲ್ ಅವರ ಜೋಡಿ 178 ರನ್ ಗಳಿಸಿತ್ತು. ಪಾಕಿಸ್ತಾನದ ವಿರುದ್ಧ ನಡೆದ ಈ ಪಂದ್ಯದಲ್ಲಿ ಈ ಜೋಡಿ ದಾಖಲಿಸಿದ್ದ ರನ್ ಗಳಿಕೆ ಬಾಂಗ್ಲಾದೇಶದ ಪರ ಅತೀ ದೊಡ್ಡ ಜೊತೆಯಾಟವಾಗಿ ದಾಖಲಾಗಿತ್ತು. ಅಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 79 ರನ್ ಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಕೀಬ್ ಮತ್ತು ಮಹಮದುಲ್ಲಾ ಜೋಡಿ ಈ ದಾಖಲೆಯನ್ನು ಅಳಿಸಿ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


