ಕ್ರಿಕೆಟ್

ಐಸಿಸಿ ಚಾಂಪಿಯನ್ಸ್​ ಟ್ರೋಫಿ: ಭಾರತದ ವಿರುದ್ಧ ಶ್ರೀಲಂಕಾಗೆ 7 ವಿಕೆಟ್​ ಜಯ

ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ತಂಡದ ಬ್ಯಾಟ್ಸಮನ್ ಗಳು ತೋರಿದ ಸಾಂಘಿಕ ಹೋರಾಟದ ಪರಿಣಾಮ ಶ್ರೀಲಂಕಾ ತಂಡ ಭಾರತದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಐಸಿಸಿ ಚಾಂಪಿಯನ್ಸ್​ ಟ್ರೋಫಿ: ಭಾರತದ ವಿರುದ್ಧ ಶ್ರೀಲಂಕಾಗೆ 7 ವಿಕೆಟ್​ ಜಯ
ಕ್ರಿಕ್ ಇನ್ಫೋ ಚಿತ್ರ
Published On :
ಓವಲ್: ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ತಂಡದ ಬ್ಯಾಟ್ಸಮನ್ ಗಳು ತೋರಿದ ಸಾಂಘಿಕ ಹೋರಾಟದ ಪರಿಣಾಮ ಶ್ರೀಲಂಕಾ ತಂಡ ಭಾರತದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಲಂಡನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 322 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಮ್ಯಾಥ್ಯೂಸ್ ಪಡೆ 48.4 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 322 ರನ್​ ಗಳಿಸಿ ಜಯಭೇರಿ ಭಾರಿಸಿದೆ. ಆ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ಪಡೆ  ಜೀವಂತವಾಗಿದ್ದು, ಮುಂದಿನ ಪಂದ್ಯವನ್ನೂ ಗೆದ್ದರೆ ಲಂಕಾ ತಂಡದ ಸೆಮೀಸ್ ಹಾದಿ ಸುಗಮವಾಗಲಿದೆ. ಶ್ರೀಲಂಕಾ ಪರ ಮೆಂಡಿಸ್​ (89 ರನ್) ಮತ್ತು ಗುಣತಿಲಕ (76 ರನ್) ಆಕರ್ಷಕ ಅರ್ಧ ಶತಕ ಗಳಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ಪೆರೇರಾ (47 ರನ್) (ಗಾಯಗೊಂಡು  ನಿವೃತ್ತಿ) ರನ್​ ಗಳಿಸಿದರು. ಇನಿಂಗ್ಸ್​ ಕೊನೆಯಲ್ಲಿ ನಾಯಕ ಏಂಜಲೋ ಮ್ಯಾಥ್ಯೂಸ್​ (ಅಜೇಯ 52 ರನ್) ಮತ್ತು ಗುಣರತ್ನೆ (ಅಜೇಯ 34 ರನ್) ಶ್ರೀಲಂಕಾಗೆ ಜಯ ತಂದಿತ್ತರು.
ಭಾರತದ ಪರ ಭವನೇಶ್ವರ್​ ಕುಮಾರ್​ ಮಾತ್ರ ವಿಕೆಟ್​ ಪಡೆಯುವಲ್ಲಿ ಸಫಲರಾದರು. ಪ್ರಮುಖವಾಗಿ ಧೋನಿ ಮತ್ತು ಭುವನೇಶ್ವರ್ ಕುಮಾರ್ ಮಾಡಿದ ಎರಡು ರನೌಟ್ ಗಳು ಗಮನ ಸೆಳೆಯಿತು. ಲಂಕಾ ಬ್ಯಾಟ್ಸಮನ್ ಗಳ ದಿಟ್ಟ ಹೋರಾಟದ ಎದುರು ಭಾರತೀಯ ಬೌಲರ್ ಗಳ  ಯಾವುದೇ ಯೋಜನೆ ಫಲ ನೀಡಲಿಲ್ಲ. ಅಂತಿಮವಾಗಿ ಭಾರತ ಲಂಕಾ ಎದುರು 7 ವಿಕೆಟ್ ಅಂತರದಿಂದ ಸೋಲು ಕಂಡಿತು.
ಇನ್ನು ಭಾರತದ ಸೆಮೀಸ್ ಹಾದಿ ಸುಗಮವಾಗಲು ಕೊಹ್ಲಿ ಪಡೆ ಭಾನುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಿದೆ. ಲಂಕಾಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮೆಂಡಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.