ಹಾರ್ದಿಕ್ ಪಾಂಡ್ಯನಂತ ಆಲ್ರೌಂಡರ್ ಆಟಗಾರ ಸಿಗುವುದು ಕಷ್ಟ: ಕೊಹ್ಲಿ
ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯನಂತ ಆಟಗಾರನನ್ನು ಹುಡುಕುವುದು ಕಷ್ಟ. ಪಾಂಡ್ಯ ಭಾರತ ಕ್ರಿಕೆಟ್ ನ ಆಸ್ತಿ ಎಂದು ತಂಡ ನಾಯಕ ವಿರಾಟ್...

Published On :
ಲಂಡನ್: ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯನಂತ ಆಟಗಾರನನ್ನು ಹುಡುಕುವುದು ಕಷ್ಟ. ಪಾಂಡ್ಯ ಭಾರತ ಕ್ರಿಕೆಟ್ ನ ಆಸ್ತಿ ಎಂದು ತಂಡ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಪಾಂಡ್ಯ ಬಹಳ ವರ್ಷಗಳ ಬಳಿಕ ಸಿಕ್ಕಿರುವ ಅತ್ಯುತ್ತಮ ಆಲ್ ರೌಂಡರ್. 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಸಹ ಮಾಡುತ್ತಾರೆ. ಅವರಂಥ ಆಟಗಾರರನ್ನು ಹುಡುಕುವುದು ಸುಲಭದ ಕೆಲಸವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಪಾಂಡ್ಯ ಆಡಿದ 6 ಎಸೆತಗಳಲ್ಲಿ 3 ಸಿಕ್ಸರ್ ಸೇರಿದಂತೆ 20 ರನ್ ಗಳಿಸಿದ್ದರು. ಇನ್ನು ಎರಡು ವಿಕೆಟ್ ಗಳನ್ನು ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿHardik Pandyaಹಾರ್ದಿಕ್ ಪಾಂಡ್ಯChampions Trophy 2017ಚಾಂಪಿಯನ್ಸ್ ಟ್ರೋಫಿ 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


