ಕ್ರಿಕೆಟ್

ಮಳೆಯಿಂದಾಗಿ ಆಸೀಸ್-ಬಾಂಗ್ಲಾ ಪಂದ್ಯ ರದ್ದು, ಉಭಯ ತಂಡಗಳಿಗೂ 1 ಅಂಕ

ಮಳೆಯಿಂದಾಗಿ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ರದ್ದಾಗಿದ್ದು ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ...

ಮಳೆಯಿಂದಾಗಿ ಆಸೀಸ್-ಬಾಂಗ್ಲಾ ಪಂದ್ಯ ರದ್ದು, ಉಭಯ ತಂಡಗಳಿಗೂ 1 ಅಂಕ
ಆಸ್ಟ್ರೇಲಿಯಾ-ಬಾಂಗ್ಲಾ ಪಂದ್ಯ ಮಳೆಯಿಂದ ರದ್ದು
Published On :
ಲಂಡನ್: ಮಳೆಯಿಂದಾಗಿ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ರದ್ದಾಗಿದ್ದು ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ. 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 44.3 ಓವರ್ ನಲ್ಲಿ 182 ರನ್ ಗಳಿಗೆ ಸರ್ವಪತನ ಕಂಡಿತು. ತಮೀಮ್ ಇಕ್ಬಾಲ್ 95 ರನ್ ಮತ್ತು ಶಕೀಬ್ ಅಲ್ ಹಸನ್ 29 ರನ್ ಬಿಟ್ಟರೆ ಮತ್ಯಾವ ಆಟಗಾರ ಎರಡಂಕಿ ದಾಟಲಿಲ್ಲ. 
ಬಾಂಗ್ಲಾದೇಶ ನೀಡಿದ ಅಲ್ಪ ಮೊತ್ತದ 183 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಮಳೆರಾಯ ಅಡ್ಡಿ ಪಡಿಸಿದ. ಆಸ್ಟ್ರೇಲಿಯಾ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. ಆದರೆ ಈ ವೇಳೆ ಮಳೆ ಬಂದಿದ್ದು ಪಂದ್ಯ ನಿಂತಿದ್ದರಿಂದ ಪಂದ್ಯವನ್ನು ರದ್ದು ಮಾಡಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.