ಕ್ರಿಕೆಟ್

ಪಾಕ್ ವಿರುದ್ಧ ಭಾರತದ ಆಟ ಶ್ಲಾಘನಾರ್ಹ: ಶಾಹಿದ್ ಅಫ್ರೀದಿ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರೀದಿ ಅಸಮಾಧಾನಗೊಂಡಿದ್ದಾರೆ.

ಪಾಕ್ ವಿರುದ್ಧ ಭಾರತದ ಆಟ ಶ್ಲಾಘನಾರ್ಹ: ಶಾಹಿದ್ ಅಫ್ರೀದಿ
ಶಾಹಿದ್ ಅಫ್ರೀದಿ
Published On :
ಬರ್ಮಿಂಗ್ ಹ್ಯಾಮ್: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರೀದಿ ಅಸಮಾಧಾನಗೊಂಡಿದ್ದಾರೆ. ಆದರೆ ಇದೇ ವೇಳೆ ಭಾರತದ ಆಟವನ್ನು ಶ್ಲಾಘನಾರ್ಹ ಎಂದು ಹೇಳಿದ್ದಾರೆ. 
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಟ್ರೋಫಿ ಟೂರ್ನಿಯಲ್ಲಿ ಭರವಸೆಯ( ಫೈನಲ್ ಪ್ರವೇಶಿಸುವ ಫೇವರೇಟ್ ತಂಡ)ವಾಗಿ ಹೊರಹೊಮ್ಮಿದೆ ಎಂದು ಶಾಹಿದ್ ಅಫ್ರೀದಿ ಹೇಳಿದ್ದಾರೆ. ಪಾಕಿಸ್ತಾನ ಪಂದ್ಯದ ಮುನ್ನ ಇದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಯಿತು, ಪಾಕಿಸ್ತಾನದ ಬೆಂಬಲಿಗನಾಗಿ ಕಳಪೆ ಪ್ರದರ್ಶನ ನೋವುಂಟು ಮಾಡಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಕ್ರಿಕೆಟ್ ನಲ್ಲಿ ಪಾರಮ್ಯ ಹೊಂದಿದೆ ಎಂಬುದು ಈ ಪಂದ್ಯದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಅಫ್ರೀದಿ ಹೇಳಿದ್ದಾರೆ. 
ಟೂರ್ನಿಯಲ್ಲಿ ಭಾರತ ಫೇವರೇಟ್ ತಂಡವಾಗಿ (ಫೈನಲ್ ಪ್ರವೇಶಿಸುವ ಸಾಧ್ಯತೆ ಇರುವ ಫೇವರೇಟ್ ತಂಡ)ವಾಗಿ  ಹೊರಹೊಮ್ಮಿದೆ ಎಂದು ಅಫ್ರೀದಿ ಐಸಿಸಿಗೆ ಬರೆದ ಅಂಕಣ ಬರಹದಲ್ಲಿ ಬರೆದಿದ್ದಾರೆ. ಜೂ.4 ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 124 ರನ್ ಗಳ ಜಯ ಗಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.