ಕ್ರಿಕೆಟ್

ಭಾರತದ ವಿರುದ್ಧ ಉನ್ನತ ಮಟ್ಟದ ಕ್ರೀಡಾ ಉತ್ಸಾಹ ಪ್ರದರ್ಶಿಸಿ: ಪಿಸಿಬಿ ಮುಖ್ಯಸ್ಥ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಾಳೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು,...

ಭಾರತದ ವಿರುದ್ಧ ಉನ್ನತ ಮಟ್ಟದ ಕ್ರೀಡಾ ಉತ್ಸಾಹ ಪ್ರದರ್ಶಿಸಿ: ಪಿಸಿಬಿ ಮುಖ್ಯಸ್ಥ
ಶಹರ್ಯಾರ್ ಖಾನ್
Published On :
ಬರ್ಮಿಂಗ್ಹ್ಯಾಮ್:  ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಾಳೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಟೀಂ ಇಂಡಿಯಾ ವಿರುದ್ಧ ಉನ್ನತ ಮಟ್ಟದ ಕ್ರೀಡಾ ಉತ್ಸಾಹ ಪ್ರದರ್ಶಿಸಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ಶಹರ್ಯಾರ್ ಖಾನ್ ಅವರು ಹಸಿರು ಬ್ರಿಗೇಡ್ ಗೆ ಶನಿವಾರ ಸಲಹೆ ನೀಡಿದ್ದಾರೆ.
ಇಂದು ಬರ್ಮಿಂಗ್ಹ್ಯಾಮ್ ನಲ್ಲಿ ಪಾಕಿಸ್ತಾನದ ಆಟಗಾರರನ್ನು ಭೇಟಿ ಮಾಡಿದ ಖಾನ್, ಭಾರತೀಯ ಆಟಗಾರರನ್ನು ಅತ್ಯಂತ ವಿಶ್ವಾಸದಿಂದ ಮತ್ತು ಒಗ್ಗಟ್ಟಿನಿಂದ ಎದುರಿಸುವಂತೆ ಸೂಚಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ದೊಡ್ಡ ಸ್ಪರ್ಧೆ ನಡೆಯುತ್ತದೆ. ಹೀಗಾಗಿ ಪಾಕ್ ಆಟಗಾರರು ಉನ್ನತ ಮಟ್ಟದ ಕ್ರೀಡಾ ಉತ್ಸಾಹ ಪ್ರದರ್ಶಿಸಬೇಕು ಎಂದು ಪಿಸಿಬಿ ಮುಖ್ಯಸ್ಥರು ಹೇಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.