ಕ್ರಿಕೆಟ್

ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಗೆ ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ

ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕಿ ಮಿಥಾಲಿ ರಾಜ್‌ಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ ರಾಜ್ ಗೆ ತೆಲಂಗಾಣ ಸರ್ಕಾರ ಒಂದು ನಿವೇಶನ ಹಾಗೂ 1 ಕೋಟಿ. ರು.ನಗದು ಬಹುಮಾನ ಘೋಷಣೆ ಮಾಡಿದೆ.

ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಗೆ ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ
ಮಿಥಾಲಿ ರಾಜ್ ಗೆ ತೆಲಂಗಾಣ ಸರ್ಕಾರದಿಂದ ಸನ್ಮಾನ
Published On :

ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕಿ ಮಿಥಾಲಿ ರಾಜ್‌ಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ  ರಾಜ್ ಗೆ ತೆಲಂಗಾಣ ಸರ್ಕಾರ ಒಂದು ನಿವೇಶನ ಹಾಗೂ 1 ಕೋಟಿ. ರು.ನಗದು ಬಹುಮಾನ ಘೋಷಣೆ ಮಾಡಿದೆ.

ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಮುಕ್ತಾಯವಾದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ಆಗಮಿಸಿದ ಆಟಗಾರ್ತಿಯರನ್ನು ಆಯಾ ರಾಜ್ಯ ಸರ್ಕಾರಗಳು ಸನ್ಮಾನಿಸುತ್ತಿದ್ದು, ಇತ್ತೀಚೆಗೆ ತೆಲಂಗಾಣ ಸರ್ಕಾರ ಕೂಡ ಮಿಥಾಲಿ  ರಾಜ್ ರನ್ನು ಆದರದಿಂದ ಬರ ಮಾಡಿಕೊಂಡು ಗೌರವಿಸಿತು. ಈ ವೇಳೆ ಸ್ವತಃ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು, ಮಿಥಾಲಿ ರಾಜ್ ರನ್ನು ಸನ್ಮಾನಿಸಿ, ಮಿಥಾಲಿ ಸಾಧನೆಯನ್ನು ಶ್ಲಾಘಿಸಿದರು.

ಇದೇ ವೇಳೆ ತೆಲಂಗಾಣ ಸರ್ಕಾರ ಮಿಥಾಲಿ ರಾಜ್ ಅವರಿಗೆ ನಿವೇಶನವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಅಲ್ಲದೆ ಒಂದು ಕೋಟಿ ನಗದು ಬಹುಮಾನ ನೀಡುವುದಾಗಿ ಹೇಳಿದೆ. ಅಂತೆಯೇ ಮಿಥಾಲಿ  ರಾಜ್ ಕೋಚ್ ಆರ್ ಎಸ್ ಆರ್ ಮೂರ್ತಿ ಅವರನ್ನೂ ಕೂಡ ರಾಜ್ಯ ಸರ್ಕಾರ ಸನ್ಮಾನಿಸಿದ್ದು, ಅವರಿಗೆ 25 ಲಕ್ಷ ರು.ನಗದು ಬಹುಮಾನ ಘೋಷಣೆ ಮಾಡಲಾಗಿದೆ.

ಸನ್ಮಾನ ಸಮಾರಂಭದಲ್ಲಿ ಮಿಥಾಲಿ ರಾಜ್ ಅವರ ಪೋಷಕರು ಸೇರಿದಂತೆ ಅವರ ಆಪ್ತ ಸ್ನೇಹಿತರು, ಸರ್ಕಾರದ ಇತರೆ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.