ಭಾರತ ಮಹಿಳಾ ವಿಶ್ವಕಪ್ ಫೈನಲ್ ತಲುಪಲು ಈ ಆಟಗಾರ್ತಿಯ ಸ್ಫೋಟಕ ಬ್ಯಾಟಿಂಗ್ ಕಾರಣ!
ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಭಾರತ ಪಾರಮ್ಯ ಮೆರೆದಿದೆ. ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬರಿ ಸೋಲುಗಳನ್ನೇ ಕಂಡಿದ್ದ ಭಾರತ ಇದೀಗ ಆಸ್ಟ್ರೇಲಿಯಾವನ್ನು ಮಣಿಸಿ ಎರಡನೇ...

Published On :
ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಭಾರತ ಪಾರಮ್ಯ ಮೆರೆದಿದೆ. ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬರಿ ಸೋಲುಗಳನ್ನೇ ಕಂಡಿದ್ದ ಭಾರತ ಇದೀಗ ಆಸ್ಟ್ರೇಲಿಯಾವನ್ನು ಮಣಿಸಿ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಲಂಡನ್ ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ಮಾಡಿದರು. 21ನೇ ಓರವ್ ಕೊನೆ ಎಸೆತದಲ್ಲಿ ಅರ್ಧ ಶಕತ ಪೂರೈಸಿದ ಹರ್ಮನ್ ಪ್ರೀತ್, 30 ಓವರ್ ಗಳ ನಂತರ ಪ್ರಚಂಡ ಬ್ಯಾಟಿಂಗ್ ನಡೆಸಿದರು. ಅರ್ಧ ಶತಕ ಗಳಿಸಲು 61 ಎಸೆತ ತೆಗೆದುಕೊಂಡಿದ್ದ ಅವರು, ತಾವೆದುರಿಸಿದ 90ನೇ ಎಸೆತದಲ್ಲಿ ಶತಕ ಪೂರೈಸಿದರು. ಏಕದಿನ ಕ್ರಿಕೆಟ್ ನಲ್ಲಿ ಇದು ಅವರ 3ನೇ ಶತಕವಾಗಿದೆ. ಹರ್ಮನ್ ಪ್ರೀತ್ 115 ಎಸೆತಗಳಲ್ಲಿ 20 ಬೌಂಡರಿ, 7 ಸಿಕ್ಸರ್ ನೆರವಿನಿಂದ 171 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಳೆಯಿಂದಾಗಿ ಪಂದ್ಯವನ್ನು 43 ಓವರ್ ಗಳಿಗೆ ಇಳಿಸಲಾಯಿತು. ಭಾರತ 281 ರನ್ ಪೇರಿಸಿತು. 282 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 36 ರನ್ ಗಳಿಂದ ಭಾರತಕ್ಕೆ ಶರಣಾಯಿತು. 2005ರ ವಿಶ್ವಕಪ್ ಭಾರತದ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದ ಸಾಧನೆ ಮಾಡಿದ್ದ ಭಾರತ ಇದೀಗ 2ನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ.
ಸೆಮಿಫೈನಲ್ ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಹರ್ಮನ್ ಪ್ರೀತ್ ಕೌರ್ ಗುಂಪಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇದು ನೋವು ತಂದಿತ್ತು. ಅಂತೂ ನಾವು ಸೆಮಿಫೈನಲ್ ಗೆ ತಲುಪಿದಾಗ ಮತ್ತೆ ಆಸ್ಟ್ರೇಲಿಯಾ ನಮಗೆ ಎದುರಾಳಿ ತಂಡವಾಯಿತು. ಈ ಪಂದ್ಯವನ್ನು ನಾವು ಕೈಚೆಲ್ಲ ಬಾರದು ಎಂದು ದೃಢ ಮನಸ್ಥೈರ್ಯದೊಂದಿಗೆ ಸ್ಫೋಟಕ ಬ್ಯಾಟಿಂಗ್ ಮಾಡಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಮಹಿಳೆindiaಭಾರತಆಸ್ಟ್ರೇಲಿಯಾAustraliawomanಐಸಿಸಿ ವಿಶ್ವಕಪ್ICC World CupHarmanpreet Kaurಹರ್ಮನ್ ಪ್ರೀತ್ ಕೌರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


