ಕ್ರಿಕೆಟ್

ತಂಡಕ್ಕಾಗಿ ಪಂದ್ಯಗಳನ್ನು ಜಯದೊಂದಿಗೆ ಮುಗಿಸಲು ಕಲಿಯುತ್ತಿದ್ದೇನೆ: ಹಾರ್ದಿಕ್ ಪಾಂಡ್ಯ

ತಂಡಕ್ಕಾಗಿ ಪಂದ್ಯಗಳನ್ನು ಮುಗಿಸಲು ಕಲಿಯುತ್ತಿದ್ದೇನೆ ಎಂದು ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ...

ತಂಡಕ್ಕಾಗಿ ಪಂದ್ಯಗಳನ್ನು ಜಯದೊಂದಿಗೆ ಮುಗಿಸಲು ಕಲಿಯುತ್ತಿದ್ದೇನೆ: ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
Published On :
ಕಿಂಗ್ಸ್‌ಸ್ಟನ್: ತಂಡಕ್ಕಾಗಿ ಪಂದ್ಯಗಳನ್ನು ಮುಗಿಸಲು ಕಲಿಯುತ್ತಿದ್ದೇನೆ ಎಂದು ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. 
ಕಿಂಗ್ಸ್‌ಸ್ಟನ್ ನಲ್ಲಿ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ಸೋತರೇ ಸರಣಿ ಸಮವಾಗಲಿದೆ. ಸದ್ಯ ನಾಲ್ಕು ಪಂದ್ಯದಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ದು ಒಂದು ಪಂದ್ಯ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ವೆಸ್ಟ್ ಇಂಡೀಸ್ ಗೆ ನಾಳಿನ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ನೋಡುತ್ತಿದೆ. 
ಈ ಮಧ್ಯೆ ಮಾತನಾಡಿದ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ವಿರುದ್ಧ ನಾಳೆ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ನಾನು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು ತಂಡಕ್ಕಾಗಿ ಪಂದ್ಯಗಳನ್ನು ಮುಗಿಸಲು ಕಲಿಯುತ್ತಿದ್ದೇನೆ ಎಂದರು. 
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಹೀನಾಯ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಕಠಿಣವಾಗಿ ಮಾತನಾಡಿದ್ದರು. ಅತ್ಯುತ್ತಮವಾಗಿ ಆಡುತ್ತಿದ್ದ ಪಾಂಡ್ಯ ರವೀಂದ್ರ ಜಡೇಜಾರಿಂದಾಗಿ ರನ್ ಔಟ್ ಆಗಿ ಪೆವಿಲಿಯನ್ ಸೇರಿದ್ದರು. ನಂತರ ಟ್ವೀಟ್ ಮಾಡಿದ್ದ ಪಾಂಡ್ಯ ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದ್ದು ಬೇರೆಯವರಿಗೆ ಅಂತಹ ಶಕ್ತಿ ಎಲ್ಲಿದೆ ಎಂದು ಟ್ವೀಟಿಸಿದ್ದರು. ಈ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.