1993ರ ಹೀರೋ ಕಪ್ ಗೆಲುವಿಗೆ ಮುಂಗುಸಿ ಕಾರಣ: ಸಚಿನ್ ತೆಂಡೂಲ್ಕರ್
1993ರ ಹೀರೋ ಕಪ್ ಗೆಲ್ಲಲ್ಲು ಪರೋಕ್ಷವಾಗಿ ಮುಂಗುಸಿ ಕಾರಣ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ...

Published On :
ಕೋಲ್ಕತ್ತ: 1993ರ ಹೀರೋ ಕಪ್ ಗೆಲ್ಲಲ್ಲು ಪರೋಕ್ಷವಾಗಿ ಮುಂಗುಸಿ ಕಾರಣ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹೀರೋ ಕಪ್ ನ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿತ್ತು. ಪಂದ್ಯದ ಕೊನೇ ಓವರ್ ನಲ್ಲಿ ಆಫ್ರಿಕಾಗೆ ಗೆಲ್ಲಲು 6 ರನ್ ಗಳಿಸಬೇಕಿತ್ತು. ಈ ವೇಳೆ ಬೌಲಿಂಗ್ ಮಾಡಿದ ಸಚಿನ್ ಯಾವುದೇ ರನ್ ನೀಡದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ದಕ್ಷಿಣ ಆಫ್ರಿಕಾದ ಆ ಪಂದ್ಯ ನನ್ನ ಪಾಲಿಗೆ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು. ಪಂದ್ಯದ 2ನೇ ಅವಧಿಯಾಟದಲ್ಲಿ ಪದೇ ಪದೇ ಮುಂಗುಸಿ ಮೈದಾನಕ್ಕೆ ಬರುತ್ತಿತ್ತು. ಇದರಿಂದ ನಮ್ಮ ಅದೃಷ್ಟ ಬದಲಾಯಿತು. ಮುಂಗುಸಿ ಬಂದಾಗಲೆಲ್ಲಾ ವಿಕೆಟ್ ಉರುಳುತ್ತಿತ್ತು. ಕೊನೇ ಓವರ್ ಎಸೆಯುವುದಕ್ಕು ಮೊದಲು ಮುಂಗುಸಿ ಬರಲೆಂದು ಕಾಯುತ್ತಿದ್ದೆ ಎಂದು ಹಳೇ ನೆನಪನ್ನು ಮೆಲುಕು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sachin Tendulkarಸಚಿನ್ ತೆಂಡೂಲ್ಕರ್ಟೀಂ ಇಂಡಿಯಾTeam Indiaದಕ್ಷಿಣ ಆಫ್ರಿಕಾSouth AfricaCricket OffbeatMongoose1993 Hero Cupಮುಂಗುಸಿ1993 ಹೀರೋ ಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


