ಗೆಲುವಿಗೆ 1 ರನ್ ಇರುವಂತೆ ಆಫ್ ಸ್ಟಂಪ್ ಕಿತ್ತು ಲಂಕಾ ಆಟಗಾರನ ಸಂಭ್ರಮ
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟ್ಸ್ ಮನ್ ಅಸೆಲಾ ಗುಣರತ್ನೆ ಪಂದ್ಯ ಗೆಲುವಿಗೂ ಮುನ್ನವೇ ಸ್ಟಂಪ್ ಕಿತ್ತು ಸಂಭ್ರಮಾಚರಿಸಿ...

Published On :
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟ್ಸ್ ಮನ್ ಅಸೆಲಾ ಗುಣರತ್ನೆ ಪಂದ್ಯ ಗೆಲುವಿಗೂ ಮುನ್ನವೇ ಸ್ಟಂಪ್ ಕಿತ್ತು ಸಂಭ್ರಮಾಚರಿಸಿ ಪಜೀತಿಗೊಳಗಾದರು.
ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಶ್ರೀಲಂಕಾಗೆ ಗೆಲ್ಲಲು 170 ರನ್ ಗುರಿ ನೀಡಿತ್ತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ ಇನ್ನು 1 ಬಾಲ್ ಇರುವಂತೆ ವಿಜಯೋತ್ಸವ ಆಚರಿಸಿತು.
ಪಂದ್ಯದ ಕೊನೆಯ ಓವರ್ ಉಭಯ ತಂಡಗಳು ಮಾಡು ಇಲ್ಲವೆ ಮಡಿ ಎಂಬತಾಗಿತ್ತು. ಕೊನೆಯ ಮೂರು ಎಸೆತದಲ್ಲಿ ಶ್ರೀಲಂಕಾಗೆ 5 ರನ್ ಬೇಕಿತ್ತು. ಈ ವೇಳೆ ಆಡುತ್ತಿದ್ದ ಅಸೆಲಾ ಗುಣರತ್ನೆ ಲಾಂಗ್ ಸ್ಟಾಪ್ ಕಡೆ ಬೌಂಡರಿ ಸಿಡಿಸುತ್ತಿದ್ದಂತೆ ಆಫ್ ಸ್ಟಂಪ್ ಗಿತ್ತು ಪಂದ್ಯ ಗೆದ್ದಂತೆ ಸಂಭ್ರಮಿಸಿದರು.
ಈ ವೇಳೆ ದಕ್ಷಿಣ ಆಫ್ರಿಕಾ ತಂಡ ಆಪೀಲ್ ಮಾಡಿದರು ಅಂಪೈರ್, ಗುಣರತ್ನೆಗೆ ತಾಳ್ಮೆಯಿಂದ ಇರಿ, ಸ್ಟಂಪ್ ಅನ್ನು ಕೆಳಗೆ ಇಡಿ. ಆಟ ಮುಂದುವರಿಸಬೇಕು ಎಂದು ಹೇಳಿದರು. ನಂತರ ಎಸೆತದಲ್ಲಿ ಅಸೆಲಾ ಒಂದು ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು. ಇದರೊಂದಿಗೆ ಶ್ರೀಲಂಕಾ ಆಫ್ರಿಕಾ ವಿರುದ್ಧದ ಸರಣಿ ಜಯಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


