ಕ್ರಿಕೆಟ್

ಟಿ20: ಇಂಗ್ಲೆಂಡ್ ಗೆಲುವಿಗೆ 148 ರನ್ ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಆಂಗ್ಲರ ಗೆಲುವಿಗೆ 148ರನ್ ಗಳ ಕಡಿಮೆ ಮೊತ್ತದ ಸವಾಲು ನೀಡಿದೆ.

ಟಿ20: ಇಂಗ್ಲೆಂಡ್ ಗೆಲುವಿಗೆ 148 ರನ್ ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
ವಿರಾಟ್ ಕೊಹ್ಲಿ
Published On :
ಕಾನ್ಪುರ: ಇಂಗ್ಲೆಂಡ್ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಆಂಗ್ಲರ ಗೆಲುವಿಗೆ 148ರನ್ ಗಳ ಕಡಿಮೆ ಮೊತ್ತದ ಸವಾಲು ನೀಡಿದೆ. 
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ವೈಫಲ್ಯ ಅನುಭವಿಸಿ, 
ಕನ್ನಡಿಗ ಕೆ.ಎಲ್. ರಾಹುಲ್ (8) ಬೇಗ ವಿಕೆಟ್ ನೀಡಿ ಆರಂಭಿಕ ಆಘಾತ ನೀಡಿದರಾದರೂ ವಿರಾಟ್ ಕೊಹ್ಲಿ (29) ಮತ್ತು ಸುರೇಶ್ ರೈನಾ (34) ಕೆಲ ಸಮಯ ಬ್ಯಾಟಿಂಗ್ ಕಾಯ್ದುಕೊಂಡು ತಂಡಕ್ಕೆ ಕೊಂಚ ಚೇತರಿಕೆ ನೀಡಿದ್ದರಿಂದಾಗಿ ಭಾರತ ನಿಗದಿತ ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
ಏಕದಿನ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಯುವರಾಜ್ ಸಿಂಗ್ (12) ಮತ್ತು ಕನ್ನಡಿಗ ಮನೀಶ್ ಪಾಂಡೆ (3), ಹಾರ್ದಿಕ್ ಪಾಂಡ್ಯ (9), ಕೂಡ ನಿರೀಕ್ಷೆಯ ಆಟ ಪ್ರದರ್ಶಿಸಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (36*) ತಂಡದ ಮೊತ್ತವನ್ನು ಏರಿಸುವಲ್ಲಿ ಏಕಾಂಗಿ ಹೋರಾಟ ನಡೆಸಿದರು. ಕಡೆಯ ಓವರ್​ಗಳಲ್ಲಿ ಧೋನಿಗೆ ಸಾಥ್ ನೀಡಿದ ಪರ್ವೆಜ್ ರಸೂಲ್ (5) ರನ್ ಗಳಿಸಿದರು. ರಸೂಲ್ ಈ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಟ್ವಿಂಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.