ಪರೋಟಾ ಮಾಡುತ್ತಿದ್ದ ಹುಡುಗನೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ!
ಪ್ರತಿಭೆಗೆ ತಕ್ಕ ಪರಿಶ್ರಮವಿದ್ದರೆ ಎಲ್ಲಿದ್ದರೂ ಫಲ ದೊರೆಯುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪಾಕಿಸ್ತಾನದಲ್ಲಿ ದೊರೆತಿದ್ದು, ಪಾಕಿಸ್ತಾನದ ಕರಾಚಿಯ ಹೊಟೆಲ್ ವೊಂದರಲ್ಲಿ ಪರೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹುಡುಗನೋರ್ವ ಇದೀಗ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಕರಾಚಿ: ಪ್ರತಿಭೆಗೆ ತಕ್ಕ ಪರಿಶ್ರಮವಿದ್ದರೆ ಎಲ್ಲಿದ್ದರೂ ಫಲ ದೊರೆಯುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪಾಕಿಸ್ತಾನದಲ್ಲಿ ದೊರೆತಿದ್ದು, ಪಾಕಿಸ್ತಾನದ ಕರಾಚಿಯ ಹೊಟೆಲ್ ವೊಂದರಲ್ಲಿ ಪರೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹುಡುಗನೋರ್ವ ಇದೀಗ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾನೆ.
ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿರುವಂತೆ ವಿವಾದಿತ ಬಲೂಚಿಸ್ತಾನದ ಮೂಲದವನಾದ ಹನನ್ ಖಾನ್ ಎಂಬಾತ ಪ್ರಸ್ತುತ 19 ವರ್ಷದೊಳಗಿನ ಪಾಕಿಸ್ತಾನ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು, ನಾಳೆಯಿಂದ ಮಲೇಷ್ಯಾ ವಿರುದ್ಧ ಆರಂಭವಾಗಲಿರುವ 2 ಟಿ-20 ಪಂದ್ಯಗಳಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಎಲೆವೆನ್ ತಂಡವನ್ನು ಪ್ರತಿನಿಧಿಸಲಿದ್ದಾನೆ. ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ.
ಹನನ್ ಖಾನ್ ಮೂಲತಃ ಬಲೂಚಿಸ್ತಾನದ ಚಮನ್ ಪ್ರಾಂತ್ಯದವನಾಗಿದ್ದು, ಜೀವನೋಪಾಯಕ್ಕಾಗಿ ಕರಾಚಿಗೆ ತೆರಳಿ ಅಲ್ಲಿನ ಸ್ಥಳೀಯ ರೆಸ್ಟೋರೆಂಟ್ ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಪರೋಟಾಗಳನ್ನು ಮಾಡುತ್ತಿದ್ದ ಹನನ್ ಖಾನ್ ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟ್ ಆಡುತ್ತಿದ್ದ. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ವೇಳೆ ಫ್ರಾಂಚೈಸಿಗಳು ಹೊಸ ಪ್ರತಿಭೆಗಳ ಶೋಧದಲ್ಲಿ ತೊಡಗಿದ್ದಾಗ ಹನನ್ ಖಾನ್ ಫ್ರಾಂಚೈಸಿಗಳ ಗಮನ ಸೆಳೆದಿದ್ದ. ಅಲ್ಲದೆ ಪಿಎಸ್ಎಲ್ ನಲ್ಲಿ ಖ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಿದ್ದ. ಇದೀಗ ಅಲ್ಲಿಂದ ನೇರವಾಗಿ ಅಂತಾರಾಷ್ಟ್ರೀಯ ತಂಡಕ್ಕೆ ಹನನ್ ಖಾನ್ ಆಯ್ಕೆಯಾಗಿದ್ದು, ಪಾಕಿಸ್ತಾನ ಹಿರಿಯರ ತಂಡವನ್ನು ಪ್ರತಿನಿಧಿಸುವ ವಿಶ್ವಾಸ ಹೊಂದಿದ್ದಾನೆ.
ತನ್ನ ಆಯ್ಕೆ ಕುರಿತಂತೆ ಮಾತನಾಡಿರುವ ಹನನ್ ಖಾನ್, ನಾನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ ಎಂಬುದನ್ನು ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನನ್ನ ಆಯ್ಕೆ ನಿಜವೇ ಆಗಿದ್ದರೆ ನಿಜಕ್ಕೂ ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗುತ್ತದೆ. ಮತ್ತೊಮ್ಮೆ ನಾನು ಪಿಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಆಯ್ಕೆ ಕುರಿತು ಖಚಿತ ಮಾಹಿತಿ ಪಡೆಯುತ್ತೇನೆ ಎಂದು ಹನನ್ ಖಾನ್ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


